ನಾಳೆ ಧಾರವಾಡದಲ್ಲಿ ಉದ್ಯೋಗ ಮೇಳ
ಧಾರವಾಡ, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಸರಕಾರದ ನಿರ್ದೇಶನದಂತೆ ಮಾರ್ಚ 9 ರಂದು ಧಾರವಾಡ ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜ್ ಗಾರ - ಉದ್ಯೋಗಮೇಳವನ್ನು ಹಮ್ಮಿಕೋಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರ
ನಾಳೆ ಧಾರವಾಡದಲ್ಲಿ ಉದ್ಯೋಗ ಮೇಳ


ಧಾರವಾಡ, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಸರಕಾರದ ನಿರ್ದೇಶನದಂತೆ ಮಾರ್ಚ 9 ರಂದು ಧಾರವಾಡ ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜ್ ಗಾರ - ಉದ್ಯೋಗಮೇಳವನ್ನು ಹಮ್ಮಿಕೋಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಕೆಸಿಡಿ ಆವರಣಕ್ಕೆ ಭೇಟಿ ನೀಡಿ, ಉದ್ಯೋಗಮೇಳದ ಸಿದ್ದತೆಗಳನ್ನು ಪರಿಶಿಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಹಿತಿ ನೀಡಿದ ಅವರು, ಉದ್ಯೋಗಮೇಳದ ನೋಂದಣಿ ಪ್ರಕ್ರಿಯೆ ಫೆಬ್ರವರಿ 25 ರಿಂದ ಆರಂಭಿಸಲಾಗಿತ್ತು. ಇಲ್ಲಿಯವರೆಗೆ ನಾಲ್ಕು ಸಾವಿರ ಜನ ಉದ್ಯೋಗ ಆಕಾಂಕ್ಷಿಗಳು ಆನ್ ಲೈನ್ ನೋಂದಣಿ ಪಡೆದಿದ್ದಾರೆ. ಆನ್ ಲೈನ್ ನೋಂದಣಿಗೆ ಮಾರ್ಚ 7 ಕೊನೆಯ ದಿನವಾಗಿತ್ತು. ಆದರೂ ಮಾರ್ಚ 9 ರಂದು ಸ್ಥಳದಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಉದ್ಯೋಗ ನೀಡುವ ಕಂಪನಿಗಳು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಇವತ್ತಿನವರೆಗೆ 65 ಕೈಗಾರಿಕೆಗಳು, 25 ಮಾನವ ಸಂಪನ್ಮೂಲ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗಿ ಆಗಲು ನೋಂದಾಯಿಸಿಕೊಂಡಿದ್ದು, ಕೌಶಲ್ಯ ಹಾಗೂ ಶೈಕ್ಷಣಿಕ ಹಿನ್ನಲೆಯುಳ್ಳ ಸುಮಾರು 3000 ಜನ ಉದ್ಯೋಗಿಗಳ ಅಗತ್ಯವಿದ್ದು, ಉದ್ಯೋಗ ನೀಡುವ ಭರವಸೆ ನೀಡಿವೆ ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande