ಬಳ್ಳಾರಿ, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ನಾನಂತೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ, ಮತದಾರರ ಸಮಸ್ಯೆಗಳನ್ನು ಕೇಳಿ - ಪರಿಹರಿಸುವ ಪ್ರಯತ್ನ ಮಾಡುವೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.
ಅವರ ಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬಳ್ಳಾರಿ ಗ್ರಾಮೀಣ ಶಾಸಕರು ಅದ್ಯಾವುದೋ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಂಡಿದ್ದು, ಈಗ ಮತ್ತೊಮ್ಮೆ ಮಂತ್ರಿ ಆಗುವವರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಫಣ ತೊಟ್ಟಿದ್ದಾರಂತೆ. ಕ್ಷೇತ್ರದ ಮತದಾರರ ಹಿತಾಸಕ್ತಿ ಕಾಪಾಡಲಿಕ್ಕಾಗಿ ನಾನು, ಕ್ಷೇತ್ರಾದ್ಯಂತ ಪ್ರವಾಸ ಮಾಡುವೆ ಎಂದರು.
ಬಿಜೆಪಿ ಮುಖಂಡ ಎಸ್. ಗುರುಲಿಂಗನಗೌಡ, ಬುಡಾ ಮಾಜಿ ಅಧ್ಯಕ್ಷ ಪಿ. ಪಾಲಣ್ಣ, ಪಾಲಿಕೆ ಸದಸ್ಯರಾದ ಎಂ. ಗೋವಿಂದರಾಜುಲು. ಕೆ. ಹನುಂಮತಪ್ಪ ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್