ಕೋಲಾರ, ೦೮ ಮಾರ್ಚ್ (ಹಿ.ಸ) :
ಆ್ಯಂಕರ್ : ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದವರಿಗೆ ಬಜೆಟ್ ಮೂಲಕ ಸಿದ್ಧರಾಮಯ್ಯ ಉತ್ತರ ಕೋಲಾರ, ೦೮ ಮಾಚ್ (ಹಿ.ಸ) ಆಂಕರ್ : ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳವರು ಗ್ಯಾರೆಂಟಿಗಳನ್ನು ಮುಂದಿಟ್ಟುಕೊAಡು ವಿನಾಕಾರಣ ಆರೋಪ ಮಾಡುತ್ತಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ಮೂಲಕ ಉತ್ತರ ನೀಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಸೀರ್ ಅಹಮದ್ ಹೇಳಿಚಿದರು.
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐತಿಹಾಸಿಕ ಬಜೆಟ್ ಮಂಡಿರುವ ಸಿದ್ದರಾಮಯ್ಯ, ಎಲ್ಲಾ ಕ್ಷೇತ್ರಗಳಿಗೂ ಸಮಾನ ಅನುದಾನ ಹಂಚಿಕೆ ಮಾಡಿದ್ದು, ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದ ಪ್ರತಿಯೊಬ್ಬರ ಮೇಲೆ ಸಾಲ ಹೊರೆಸಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರ ಇರುವ ರಾಜ್ಯಗಳ ಪರಿಸ್ಥಿತಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ, ೪.೦೯ ಲಕ್ಷ ಕೋಟಿ ರೂ. ಗ್ರಾತ್ರದ ಬಜೆಟ್ ಇದಾಗಿದ್ದು, ಹಿಂದಿನ ಸರ್ಕಾರಗಳಿಗೆ ಹೊಲಿಸಿದರೆ ಇದೇ ದೊಡ್ಡ ಬಜೆಟ್ ಆಗಿದೆ. ನಮ್ಮ ಸರ್ಕಾರವು ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಹೊರತು, ಸಾಲ ಹೊರೆಸುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹ ಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದು, ಇದನ್ನು ಆದಷ್ಟು ಬೇಗ ಜಾರಿಗೆ ತಂದು ಜನತೆಗೆ ಗುಣಮಟ್ಟದ ಆರೋಗ್ಯದ ಜತೆಗೆ, ಬಡವರ ಮಕ್ಕಳಿಗೆ ವೈದ್ಯಕಿಯ ಶಿಕ್ಷಣ ಕಲ್ಪಿಸಲು ಸಹಕಾರಿಯಾಗಲಿದೆ. ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಬೇಕು ಹೊರತು ಟೀಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಬಜೆಟ್‌ನಲ್ಲಿ ಮಾಲೂರು ಕ್ಷೇತ್ರಕ್ಕೆ ಸಿಂಹಪಾಲು ದೊರೆತಿದೆ. ತಮಿಳುನಾಡು ಗಡಿತನಕ ರಸ್ತೆ ಅಭಿವೃದ್ಧಿ, ಆಸ್ಪತ್ರೆಗೆ ಅನುದಾನ, ಶಿವಾರಪಮಟ್ಟಣದಲ್ಲಿ ಇಂಡಸ್ಟ್ರೀಯಲ್ ಪಾರ್ಕ್ ನಿರ್ಮಾಣಕ್ಕೆ ಘೋಷಣೆ ಮಾಡಿರುವುದು ಖುಷಿ ತಂದಿದೆ ಎಂದರು.
ರಸ್ತೆಗಳ, ಮೇಲ್ಸೆತುವೆ ಸೇರಿದಂತೆ ವಿವಿಧ ಅಭಿವೃದ್ಧಿಗೆ ಕಾರ್ಯಕ್ರಮಗಳಿಗೆ ಚಾಲನೆ ಕಾರ್ಯಕ್ರಮವನ್ನು ಇದೇ ತಿಂಗಳಲ್ಲಿ ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಯಮಯ್ಯ ಸೇರಿದಂತೆ ಸಚಿವರು ಭಾಗವಹಿಸಲಿದ್ದಾರೆ. ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲೂ ಸಹ ಇನ್ನು ಹೆಚ್ಚಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷಿö್ಮದೇವಿ, ಕೆಯುಡಿಎ ಅಧ್ಯಕ್ಷ ಮೊಹಮ್ಮದ್ ಅನ್ ಮುಖಂಡ ಸೀಸಂದ್ರ ಗೋಪಾಲ್ ಮತಿತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರದಲ್ಲಿ ಶನಿವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ಇತರೆ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್