ಬೆಂಗಳೂರು, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ಹೆಣ್ಣೆಂದರೆ ಸಹನೆ, ಸಹಿಷ್ಣುತೆ, ಪ್ರೀತಿ, ತ್ಯಾಗ, ಮಮತೆಯ ಸಾಕಾರ ಮೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳಾ ದಿನಾಚರಣೆ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿರುವ ಅವರು, ತಾಯಾಗಿ ಜನ್ಮ ಕೊಟ್ಟು, ಸಹೋದರಿಯಾಗಿ ಸಲಹಿ, ಹೆಂಡತಿಯಾಗಿ ಜೊತೆನಿಂತು, ಮಗಳಾಗಿ ಪೊರೆಯುವವಳು ಹೆಣ್ಣು.
ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ದೌರ್ಜನ್ಯ, ಅಸಮಾನತೆಗಳ ವಿರುದ್ಧದ ಮಹಿಳೆಯರ ದನಿಗೆ ನಾವು - ನೀವೆಲ್ಲರೂ ದನಿಗೂಡಿಸೋಣ. ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa