ಅಲ್ಪಸಂಖ್ಯಾತರಿಗೆ ಶೇ. 20 ಅನುದಾನ : ವಿರೋಧಿಸುವುದಿಲ್ಲ-ಬಿ. ಶ್ರೀರಾಮುಲು
ಬಳ್ಳಾರಿ, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಶೇ. 20 ರಷ್ಟು ಮೀಸಲು ಮಾಡಿರುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ. ಅವರ ಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶ
ಅಲ್ಪಸಂಖ್ಯಾತರಿಗೆ ಶೇ. 20 ಅನುದಾನ : ವಿರೋಧಿಸುವುದಿಲ್ಲ : ಬಿ. ಶ್ರೀರಾಮುಲು


ಅಲ್ಪಸಂಖ್ಯಾತರಿಗೆ ಶೇ. 20 ಅನುದಾನ : ವಿರೋಧಿಸುವುದಿಲ್ಲ : ಬಿ. ಶ್ರೀರಾಮುಲು


ಅಲ್ಪಸಂಖ್ಯಾತರಿಗೆ ಶೇ. 20 ಅನುದಾನ : ವಿರೋಧಿಸುವುದಿಲ್ಲ : ಬಿ. ಶ್ರೀರಾಮುಲು


ಬಳ್ಳಾರಿ, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಶೇ. 20 ರಷ್ಟು ಮೀಸಲು ಮಾಡಿರುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.

ಅವರ ಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾನು ಎಲ್ಲರನ್ನೂ ಸಮಾನರಾಗಿ ನೋಡುವೆ. ನಮ್ಮ ಪಕ್ಷದವರು ವಿರೋಧಿಸಿದರೆ ಅದು ಪಕ್ಷದ ನಿರ್ಧಾರ. ವೈಯಕ್ತಿಕವಾಗಿ ನಾನು ವಿರೋಧಿಸುವುದಿಲ್ಲ ಎಂದರು.

ಕರ್ನಾಟಕ ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ. ರಾಜ್ಯದ ಖಜಾನೆ ದಿವಾಳಿಯಾಗಿದೆ. ರಾಜ್ಯ ಸರ್ಕಾರದ ಸಾಲ 7 ಲಕ್ಷ ಕೋಟಿಗೆ ಹೆಚ್ಚಿದೆ. ರಾಜ್ಯದ ಪ್ರತಿಯೊಬ್ವರ ತಲೆ ಮೇಲೆ ಒಂದು ಲಕ್ಷ ರೂ ಸಾಲ ಹೊರಿಸಲಾಗಿದೆ. ಸಾಲ ಮಾಡಿ ತುಪ್ಪ ತಿಂದಂತಾಗಿದೆ. ಆದಾಯ ಕ್ರೂಡೀಕರಣದಲ್ಲಿ ಸಿದ್ಧರಾಮಯ್ಯ ಅವರು ಸಂಪೂರ್ಣ ವವಿಫಲರಾಗಿದ್ದಾರೆ. ಬಳ್ಳಾರಿಯಲ್ಲಿ ಹಳೇ ಯೋಜನೆಗಳನ್ನು ಪೂರ್ಣಗೊಳಿಸಲಾಗಿಲ್ಲ ಎಂದರು.

ಎಸ್ಸಿ ಎಸ್ಟಿಯ ಮೀಸಲಿನ 25 ಸಾವಿರ ಕೋಟಿ ರೂ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಡಲಾಗಿದೆ. ಈ ಬಜೆಟ್ ನಲ್ಲಿ 15 ಸಾವಿರ ಕೋಟಿ ರೂ ಎಸ್ಸಿಪಿ ಎಸ್ಟಿಪಿ ಹಣವನ್ನು ಗ್ಯಾರೆಂಟಿ ಯೋಜನೆಗೆ ಮೀಸಲು ಮಾಡಲಾಗಿದೆ. ಇದರಿಂದ ಎಸ್ಸಿ, ಎಸ್ಟಿಗಳಿಗೆ ಭಾರಿ ಅನ್ಯಾಯವಾಗಿದೆ. ಕಾರಣ 7 ಸಿ ನಿಯಮವನ್ಮು ರದ್ದು ಮಾಡಬೇಕು ಎಂದರು.

ಎಐಸಿಸಿ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದ ಜೀನ್ಸ್ ಅಪರೆಲ್ ಪಾರ್ಕ್ ಆಗಲಿಲ್ಲ.‌ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಕೇವಲ ಚರ್ಚೆಗೆ ಸೀಮಿತವಾಗಿದೆ. ಬೆಂಬಲ ಬೆಲೆಯ ಖರೀದಿ ಕೇಂದ್ರಗಳ ಆರಂಭವಾಗಿಲ್ಲ. ಒಣ ಮೆಣಸಿನಕಾಯಿ ಮಾರುಕಟ್ಟೆ ಆಗಲಿಲ್ಲ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande