ಬಳ್ಳಾರಿ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ರಾಜ್ಯ ಬಜೆಟ್ ಮೊದಲ ಬಾರಿಗೆ ರೂಪಾಯಿ 4,00,000 ಕೋಟಿಗಳ ಗಡಿ ದಾಟಿರುವುದು ಸಂತೋಷದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕ್ಷೇತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ 5000 ಶಿಕ್ಷಕರ ನೇಮಕಾತಿ ನಿರ್ಣಯ ಜಾರಿಗೆ ಬರಬೇಕು. ಕಲ್ಯಾಣ ಕರ್ನಾಟಕದ ಒಂಬತ್ತು (09) ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು 150 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮತ್ತು ಇತರೆ 7 ಕೇಂದ್ರಗಳಲ್ಲಿ 100 ಹಾಸಿಗೆಗಳಿಗೆ ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವುದು ಜಾರಿಗೆ ಬರಬೇಕು.
ಆದರೆ, ಬಳ್ಳಾರಿ ಜಿಲ್ಲೆಯ ಬಹುನಿರೀಕ್ಷಿತ ಅಪಾರಲ್ ಪಾರ್ಕ್, ಒಣ ಮೆಣಸಿನಕಾಯಿ ಮಾರುಕಟ್ಟೆ ಮತ್ತು ವಿಮಾನ ನಿಲ್ದಾಣ ನಿರ್ಮಾಣದ ವಿಷಯಗಳೇ ಪ್ರಸ್ತಾಪವಾಗಿಲ್ಲ.
ಸಣ್ಣ ಕೈಗಾರಿಕೆಗಳ ನೀತಿ ಮಾಡುವುದಾಗಿ ಘೋಷಿಸಿರುವುದು ಪ್ರಾದೇಶಿಕ ಅಸಮಾನತೆ ತಗ್ಗಿಸುವ ಮತ್ತು ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದ್ದು, ಹೊಸ ತಂತ್ರಜ್ಞಾನ ನೀತಿ ಘೋಷಣೆ ಉದ್ಯೋಗ ಸೃಷ್ಟಿಯಲ್ಲಿ ಸಹಾಯಕವಾಗುತ್ತದೆ.
ಸಿರಿಗೇರಿ ಪನ್ನಾರಾಜ್,
ಸಿಎ, ಮಾಜಿ ಅಧ್ಯಕ್ಷರು
ದಕ್ಷಿಣ ಭಾರತ ಚಾರ್ಟೆಡ್ ಅಕೌಂಟೆಂಟ್ ಅಸೋಸಿಯೇಷನ್, ಬಳ್ಳಾರಿ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್