ಉತ್ತಮ ಬಿತ್ತನೆ ಬೀಜಗಳಿಗೆ ಆದ್ಯತೆ : ರೈತ ಆನಂತ್ ಮನವಿ
ರೈತರು ಉತ್ತಮ ಬಿತ್ತನೆ ಬೀಜಗಳಿಗೆ ಆದ್ಯತೆ ನೀಡಿ: ರೈತ ಆನಂತ್ ಮನವಿ
ಚಿತ್ರ: ಕೋಲಾರ ತಾಲ್ಲೂಕಿನ ವಡಗೂರು ಗ್ರಾಮದ ರೈತ ಅನಂತ್ ಅವರ ತೋಟದಲ್ಲಿ ಉತ್ತಮ ಕಲ್ಲಂಗಡಿ ಬೆಳೆಗೆ ಬಿತ್ತನೆ ಬೀಜದ ನೋನ್-ಯು ಸೀಡ್ ಕಂಪನಿಯಿಂದ ಪ್ರಗತಿ ಪರ ರೈತ ಅನಂತ್ ರನ್ನು ಸನ್ಮಾನಿಸಲಾಯಿತು.


ಕೋಲಾರ, ಮಾರ್ಚ್ 0೭ (ಹಿ.ಸ.) :

ಆ್ಯಂಕರ್ : ರೈತರು ಯಾವುದೇ ಬೆಳೆ ಬೆಳೆಯಬೇಕಾದರೂ ಉತ್ತಮ ಗುಣಮಟ್ಟದ ತಳಿಯ ಬಿತ್ತನೆ ಬೀಜ ಬಹು ಮುಖ್ಯವಾದುದು ಆದ್ದರಿಂದ ರೈತರು ಮಾರುಕಟ್ಟೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜ ಆರಿಸಿಕೊಂಡು ಬಿತ್ತನೆ ಮಾಡಿದರೆ ಉತ್ತಮ ಬೆಳೆ ಮಾಡಬಹುದು ಹಾಗು ಹೆಚ್ಚು ಲಾಭ ಗಳಿಸಬಹುದು ಎಂದು ಪ್ರಗತಿ ಪರ ರೈತ ಅನಂತ್ ತಿಳಿಸಿದರು

ತಾಲ್ಲೂಕಿನ ವಡಗೂರು ಗ್ರಾಮದ ರೈತ ಅನಂತ್ ಅವರ ತೋಟದಲ್ಲಿ ಉತ್ತಮ ಕಲ್ಲಂಗಡಿ ಬೆಳೆಗೆ ಬಿತ್ತನೆ ಬೀಜದ ನೋನ್-ಯು ಸೀಡ್ ಕಂಪನಿಯಿಂದ ನಡೆಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೈತರು ಯಾವುದರಲ್ಲೂ ಕಡಿಮೆ ಇಲ್ಲದಾಗಿದೆ, ಸರ್ಕಾರಗಳು ಮೊದಲು ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ಗೊಬ್ಬರಗಳು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಆಗ ಮಾತ್ರ ರೈತ ಸಂಕುಲ ಉಳಿಯಬಹುದಾಗಿದೆ ಕೆಲ ಬಿತ್ತನೆ ಬೀಜದ ಕಂಪನಿಗಳು ಬಿತ್ತನೆ ಬೀಜಗಳು ನೇರವಾಗಿ ರೈತರಿಗೆ ನೀಡಲಾಗುತ್ತಿದ್ದು ಬಿತ್ತನೆ ಮಾಡಿದಾಗಿನಿಂದ ಬೆಳೆ ತೆಗೆಯುವವರೆಗೂ ಪ್ರತಿ ವಾರಕ್ಕೊಮ್ಮೆ ತೋಟಕ್ಕೆ ಭೇಟಿ ನೀಡಿ ಬೆಳೆಯ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಳ್ಳುತ್ತಿರುತ್ತಾರೆ ಅಂತಹ ಕಂಪನಿ ಬೀಜಗಳನ್ನು ಹೆಚ್ಚು ಬಳಕೆ ಮಾಡಬೇಕಾಗಿದೆ ಎಂದರು

ಕಲ್ಲಂಗಡಿ ಬೆಳೆ ಸುಲಭದ ಬೆಳೆಯಾಗಿದ್ದು ಕಡಿಮೆ ಮಾನವ ಸಂಪನ್ಮೂಲ ಹಾಗು ಕಡಿಮೆ ಖರ್ಚಿನ ಸುಲಭ ಬೆಳೆಯಾಗಿದೆ, ಕಲ್ಲಂಗಡಿ ಬೇಸಿಗೆ ಕಾಲದಲ್ಲಿ ಮನುಷ್ಯನ ದೇಹದಲ್ಲಿ ನೀರಿನಾಂಶ ನೀಡುವ ಆಹಾರವಾಗಿರುವುದರಿಂದ ಸಾರ್ವಜನಿಕರು ಅಪಪ್ರಚಾರಗಳಿಗೆ ಕಿವಿ ಕೊಡದೆ ನಿರ್ಭೀತಿಯಿಂದ ಕಲ್ಲಂಗಡಿ ಸೇವಿಸಬಹುದಾಗಿದೆ ಎಂದರು

ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ನೊನ್-ಯು ಸೀಡ್ ಕಂಪನಿ ವ್ಯವಸ್ಥಾಪಕ ಅರವಿಂದ್ ಬಾಲ್ಕೆ ಮಾತನಾಡಿ ನಾವು ಯಾವುದೇ ಬಿತ್ತನೆ ಬೀಜಗಳನ್ನು ಅಂಗಡಿಗಳಿಗೆ ನೀಡಿ ಸುಮ್ಮನಿರುವುದಿಲ್ಲ, ಬಿತ್ತನೆ ಬೀಜಗಳನ್ನು ನೇರವಾಗಿ ರೈತರಿಗೆ ನೀಡಿ ರೈತರನ್ನು ಬೆಳೆಗಳನ್ನು ನಾಟಿ ಮಾಡಿದಾಗಿನಿಂದಲೂ ಕೊನೆಯದಾಗಿ ಬೆಳೆ ಕೊಯ್ಲು ಮಾಡುವವರೆಗೂ ರೈತರ ತೋಟಗಳಿಗೆ ಭೇಟಿ ನೀಡಿ ನೆಳೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಉತ್ತಮ ಬೆಳೆ ಬೆಳೆದ ರೈತರನ್ನು ಗುರ್ತಿಸಿ ಅಂತಹ ರೈತರನ್ನು ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರಾದ ಒದಲವಾಡಿ ವೆಂಕಟೇಶಪ್ಪ, ಆಂಜಪ್ಪ, ನರ್ಸರಿ ಸತೀಶ್, ಕಲ್ಲಂಗಡಿ ವ್ಯಾಪರಸ್ಥ ಖಲೀಂ, ಕಂಪನಿಯ ವ್ಯವಸ್ಥಾಪಕ ರವೀಂದ್ರ ಕುಮಾರ್ ಹಾಜರಿದ್ದರು

ಚಿತ್ರ: ಕೋಲಾರ ತಾಲ್ಲೂಕಿನ ವಡಗೂರು ಗ್ರಾಮದ ರೈತ ಅನಂತ್ ಅವರ ತೋಟದಲ್ಲಿ ಉತ್ತಮ ಕಲ್ಲಂಗಡಿ ಬೆಳೆಗೆ ಬಿತ್ತನೆ ಬೀಜದ ನೋನ್-ಯು ಸೀಡ್ ಕಂಪನಿಯಿಂದ ಪ್ರಗತಿ ಪರ ರೈತ ಅನಂತ್ ರನ್ನು ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande