ಕೊಪ್ಪಳ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಎಪ್ರೀಲ್, ಮೇ ಮತ್ತು ಜೂನ್-2025ರ ಮಾಹೆಯಲ್ಲಿ ಕ್ರೀಡೆಗಳ ಜಿಲ್ಲಾ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
ಮಕ್ಕಳನ್ನು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ಹೊಂದಲು ಹಾಗೂ ಕ್ರೀಡಾ ಪಟುಗಳ ಆರೋಗ್ಯದ ಹಿತದೃಷ್ಠಿಯಿಂದ ಮತ್ತು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈಯಲು ಅನುಕೂಲವಾಗುವ ದೃಷ್ಠಿಯಿಂದ ಈ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಈ ತರಬೇತಿ ಶಿಬಿರದಲ್ಲಿ ಕನಿಷ್ಠ 10 ಜನರು ಇಲಾಖೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದಲ್ಲಿ ಅಂತಹ ಕ್ರೀಡೆಗಳನ್ನು ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗುತ್ತದೆ ಮತ್ತು ಕೆಲವು ಕ್ರೀಡೆಗಳಿಗೆ ಶುಲ್ಕವಿದ್ದು, ಇನ್ನು ಕೆಲವು ಕ್ರೀಡೆಗಳಿಗೆ ಉಚಿತವಾಗಿರುತ್ತವೆ.
ಕ್ರೀಡೆಗಳ ವಿವರ: ಸ್ವಿಮಿಂಗ್, ಬ್ಯಾಡ್ಮಿಂಟನ್, ವಾಲಿಬಾಲ್, ಕಬಡ್ಡಿ, ಖೋಖೋ, ನೆಟ್‍ಬಾಲ್, ಸ್ಕೇಟಿಂಗ್, ಅಥ್ಲೇಟಿಕ್ಸ್ ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಯೋಗ, ಕರಾಟೆ, ಚೆಸ್, ಕುದುರೆ ಸವಾರಿ, ಫುಟ್‍ಬಾಲ್, ಸಂಗೀತ ಸಾಧನಗಳು, ಸಾಹಸ ಕ್ರೀಡೆ/ ಟ್ರಕ್ಕಿಂಗ್, ಕುಸ್ತಿ. ಈ ಎಲ್ಲಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತ ಯುವಕ, ಯುವತಿಯರು ಈ ಬೇಸಿಗೆ ತರಬೇತಿ ಶಿಬಿರದಲ್ಲಿ ಕ್ರೀಡೆಗಳಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ: 08539-230121 ಕ್ಕೆ ಅಥವಾ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸಂಪರ್ಕಿಸುವಂತೆ ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್