ಈ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು : ಶೃಂಗೇರಿ ಸ್ವಾಮೀಜಿ
ಈ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು : ಶೃಂಗೇರಿ ಸ್ವಾಮೀಜಿ
ಈ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು : ಶೃಂಗೇರಿ ಸ್ವಾಮೀಜಿ


ಕೊಪ್ಪಳ, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ ಜನರಿಗೆ ಒಳ್ಳೆಯದು ಆಗಬೇಕು ಎನ್ನುವ ಕಾರಣಕ್ಕೆ ಶಂಕರ ಮಠ ನಿರ್ಮಾಣ ಅಗತ್ಯವಿದೆ. ಇಂಥ ಪುಣ್ಯದ ಕೆಲಸಕ್ಕೆ ಈಗ ಮುಹೂರ್ತ ಕೂಡಿ ಬಂದಿದೆ ಎಂದರು.

ಜೀವನದ ಸಾರ್ಥಕತೆಗೆ ಬೇಕಾದ ಉಪದೇಶವನ್ನು ಸ್ವಾಮೀಜಿ ಹೇಳಿದ್ದಾರೆ. ‌

ಮನುಷ್ಯನ ಜೀವನ ಎಷ್ಟು ಶ್ರೇಷ್ಠ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಈ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದ್ದಾರೆ. ಎಲ್ಲರೂ ಸರ್ವೆ ಸಾಧಾರಣವಾಗಿ ‌ಬಯಸುವುದು ಸುಖ, ಹಾಗೂ ಸುಖಃ ಇರಬಾರದು ಎಂದು ಮನುಷ್ಯ ಬಯಸುತ್ತಾನೆ.

ಇರುವುದರಲ್ಲಿಯೇ ಸುಖ ಬಯಸುವುದು ಉತ್ತಮ. ಸುಖವಾಗಿ ಇರಬೇಕು ಎನ್ನುವುದು ಎಲ್ಲರಿಗೂ ಆಸೆ. ದುಃಖ ಬರಲೇಬಾರದು ಎಂದು ಬಯಸುತ್ತಿದ್ದಾರೆ. ಎಲ್ಲರ ಬಯಕೆ ಸುಖ ಸಾಧ್ಯವೇ? ಎಂದರು.

ಸುಖವನ್ನು ಶಾಸ್ತ್ರದಲ್ಲಿ ಮೋಕ್ಷ ಎಂದು ಕರೆಯಲಾಗುತ್ತದೆ. ಅದು‌ ಮೋಕ್ಷದ ಸುಖ ಎಂದು ಹೆಸರಿದೆ. ಮನುಷ್ಯ ಅಂತಿಮವಾಗಿ ಬಯಸುವುದು ಮೋಕ್ಷವನ್ನು ಬಯಸುತ್ತಾನೆ. ಅದಕ್ಕೆ ಅನುಗ್ರಹ ಮಾಡಿದ್ದು ಶಂಕರಾಚಾರ್ಯರು.

ಎಲ್ಲರೂ ಬಯಸುವುದು ಮೋಕ್ಷದ ಮಾರ್ಗವನ್ನು ಶಂಕರಾಚಾರ್ಯರು ಬೋಧನೆ ಮಾಡಿದ್ದರಿಂದ ಅವರಿಗೆ ಅಸಾಧಾರಣ ಶಕ್ತಿ ಇದೆ ಎಂದರು.

ಭಕ್ತರಿಂದ ಹಾಗೂ ಸಮುದಾಯದ ಸಂಘಟನೆಗಳಿಂದ ಶ್ರೀಗಳಿಗೆ ಫಲ ಸಮರ್ಪಣೆ, ಭಿನ್ನವತ್ತಳೆ ಸಮರ್ಪಣೆ ಮಾಡಲಾಯಿತು.

ಶಂಕರ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಪದಕಿ ಮಾತನಾಡಿ ಸಮಿತಿ ಆರಂಭವಾದ ದಿನದಿಂದ ಎಲ್ಲ ಧಾರ್ಮಿಕ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ‌.ಸಮುದಾಯದ ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ. ಸಮಾಜಮುಖಿ ಅನೇಕ ಕೆಲಸಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಸಮಿತಿ ಎಲ್ಲ ಸದಸ್ಯರು ಹಾಗೂ ಸ್ವಾಮೀಜಿ ಅವರ ಆಶೀರ್ವಾದ ಇದಕ್ಕೆ ಕಾರಣ ಎಂದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande