ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯ ಜನತೆಗೆ ಮೂರು ನಾಮ : ರೈತ ಸಂಘ ಆಕ್ರೋಶ
ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯ ಜನತೆಗೆ ಮೂರು ನಾಮ ರೈತ ಸಂಘ ಆಕ್ರೋಶ
ಚಿತ್ರ: ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿದ ಬಜೆಟ್‌ನಲ್ಲಿ ಕೋಲಾರಕ್ಕೆ ಶೂನ್ಯ ಕೊಡುವೆ ಎಂದು ಆರೋಪಿಸಿದ ರೈತ ಸಂಘದ ಮುಖಂಡರು.


ಕೋಲಾರ, ಮಾರ್ಚ್.೭ (ಹಿ.ಸ.) :

ಆ್ಯಂಕರ್ : ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಯ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕೋಶ ವ್ಯಕ್ತಪಡಿಸಿದರು.

ನಾಮ ಹಾಕಿ. ರೈತ.ವಿರೋದಿ ಬಜೆಟ್. ಮಂಡಿಸಿರುವ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿ ಸರ್ಕಾರಗಳು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಉಸ್ತುವಾರಿ ಸಚಿವರ ನೇಮಕದಿಂದ ಹಿಡಿದು ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದರೂ ೪ ಜನ ಶಾಸಕರಿದ್ದರೂ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲವಾಗಿದ್ದಾರೆ. ಎಂದು ಆರೋಪಿಸಿದರು.

ಜಿಲ್ಲೆಯ ಮಾರುಕಟ್ಟೆ ಜಾಗದ ಸಮಸ್ಯೆ, ಕೃಷಿ ಆಧಾರಿತ ಕೈಗಾರಿಕೆಗಳು, ಮಾವು ಸಂಸ್ಕರಣಾ ಘಟಕಗಳ ಜೊತೆಗೆ ಬೆಲೆ ಕುಸಿತದಿಂದ ಕಂಗಾಲಾಗಿರುವ ರೇಷ್ಮೆ, ಟೊಮೇಟೊ, ಮಾವು ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ನಕಲಿ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ನಿಯಂತ್ರಣಕ್ಕೆ ಕಾನೂನು ರಚನೆ ಮಾಡುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರ ನಿರೀಕ್ಷೆಯನ್ನು ಹುಸಿಗೊಳಿಸಿರುವ ಸರ್ಕಾರಕ್ಕೆ ಜಿಲ್ಲೆಯ ಜ್ಞಾಪಕ ಇಲ್ಲದೇ ಇದ್ದರೆ ಹೊರ ರಾಜ್ಯದ ಆಂಧ್ರ ಇಲ್ಲವೇ ತಮಿಳುನಾಡಿಗೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಆಂಧ್ರ, ತಮಿಳುನಾಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಗೆ ಖಾಸಗೀ ಸಹಭಾಗಿತ್ವ ದಲ್ಲಿ ವೈದ್ಯಕೀಯ ಸರ್ಕಾರಿ ಕಾಲೇಜು ಸ್ಥಾಪನೆ ಆಡ್ಡ ಗೋಡೆಯ ಮೇಲೆ ದೀಪವಿಟ್ಟುವ.ಜೊತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಅನುದಾನ ಮತ್ತು ಕೆರೆ ಅಭಿವೃದ್ಧಿಗೆ ಅನುದಾನ ಮತ್ತು ಒತ್ತುವರಿ ತೆರವುಗೊಳಿಸುವ ಭೂಕಬಳಿಕೆ ನ್ಯಾಯಾಲಯದ ಅಂತರದ ಮಿತಿಯನ್ನು ಸಡಿಲಗೊಳಿಸುವ ನಿರೀಕ್ಷೆ ಹುಸಿಯಾಗಿದೆ.

ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ವಿವಾದಿತ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ ಎಪಿಎಂಸಿ ಕಾಯ್ದೆ ವಾಪಸ್ ಪಡೆದಿರುವುದೇ ರಾಜ್ಯದ ರೈತರಿಗೆ ನೀಡಿರುವ ದೊಡ್ಡ ಉಡುಗೊರೆ. ಆದರೆ, ಜಿಲ್ಲೆಯ ನೀರಾವರಿ ಯೋಜನೆಗಳಾದ ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ, ಯರಗೋಳ್, ಉದ್ಘಾಟನೆ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಚಕಾರವೆತ್ತದೆ ಇರುವುದು ದುರಾದೃಷ್ಠಕರ ಜೊತೆಗೆ.ಡಿ.ಸಿ.ಸಿ.ಬ್ಯಾಂಕು ಮತ್ತು ಹಾಲು ಒಕ್ಕೂಟದ ಬಗ್ಗೆ ದ್ವನಿಯಿಲ್ಲ ಮಹಿಳೆಯರಿಗೆ. .ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿಗಳು ಸ್ರಿ ಶಕ್ತಿ. ಸಂಘಗಳ ಸಾಲ ಮನ್ನಾ ಇಲ್ಲ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಹುಸಿಯಾಗಿದೆ. ಯಾಕೋ ಗೊತ್ತಿಲ್ಲ ಕೋಲಾರ ಜಿಲ್ಲೆಯ ಪರಿಸ್ಥಿತಿ ಯಾವ ಸರ್ಕಾರ ಬಂದರೂ ಬದಲಾವಣೆಯಾಗುವುದಿಲ್ಲವೆಂದು ನಿಶ್ಚಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕೇಶವ,ಹೆಬ್ಬಣಿ ಆನಂದರೆಡ್ಡಿ, , ದೇವರಾಜ್, ಶ್ರೀನಿವಾಸ್, ವಿಜಯ್‌ಪಾಲ್, ವಿಶ್ವ, ಗುರುಮೂರ್ತಿ, ಸುನೀಲ್ ಕುಮಾರ್, ಭಾಸ್ಕರ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ನರಸಿಂಹಯ್ಯ, ಯಲುವಳ್ಳಿ ಪ್ರಭಾಕರ್, ತರ‍್ನಹಳ್ಳಿ ಆಂಜಿನಪ್ಪ, ಲಕ್ಷ್ಮಣ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮುಂತಾದವರು ಇದ್ದರು.

ಚಿತ್ರ: ರಾಜ್ಯ ಸರ್ಕಾರದಿಂದ ಘೋಷಣೆ ಮಾಡಿದ ಬಜೆಟ್‌ನಲ್ಲಿ ಕೋಲಾರಕ್ಕೆ ಶೂನ್ಯ ಕೊಡುವೆ ಎಂದು ಆರೋಪಿಸಿದ ರೈತ ಸಂಘದ ಮುಖಂಡರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande