ಕೋಲಾರ, ಮಾರ್ಚ್.೭ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಜೆಟ್‌ನಲ್ಲಿ ಮುಂದಾಗಿರುವ ಕಾಂಗ್ರೆಸ್ ಸರ್ಕಾರವು ಬಂಡವಾಳಶಾಹಿಗಳ ಮೂಲಕ ದುಡ್ಡು ಹೊಡೆಯುವ ಹುನ್ನಾರವಾಗಿದೆ ಜೊತೆಗೆ ಕೆಜಿಎಫ್ ನಲ್ಲಿ ಹೈಟೆಕ್ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಣ ಬಿಡುಗಡೆ ಮಾಡಿದ್ದಾರೆ ಹೊಟ್ಟೆ ಹಸಿದವರಿಗೆ ಊಟ ಕೊಡಬೇಕೇ ಹೊರತು ಹೊಟ್ಟೆ ತುಂಬಿದವರಿಗೆ ಅಲ್ಲ ಕೋಲಾರದಲ್ಲಿ ಎಪಿಎಂಸಿಗೆ ಅವಶ್ಯಕತೆ ಇರುವ ಜಾಗ ಕೊಡದೇ ಕೆಜಿಎಫ್ ಭಾಗಕ್ಕೆ ಕೊಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಬಜೆಟ್ ಕುರಿತು ವ್ಯಂಗ್ಯ ಮಾಡಿದರು
ಕೋಲಾರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಿದರೆ ನಗರದಲ್ಲಿನ ಪ್ರವಾಸಿ ಮಂದಿರ, ಹಾಗೂ ರೇಷ್ಮೆ ಇಲಾಖೆಯ ಜಾಗವನ್ನು ಬಳಸಿಕೊಳ್ಳಲು ಮುಂದಾಗಿದ್ದು ಇದಕ್ಕೆ ಜೆಲ್ಲೆಯ ಜನ ವಿರೋಧಿಸಲಾಗುತ್ತದೆ ಪ್ರತ್ಯೇಕವಾಗಿ ಜಾಗವನ್ನು ಗುರುತಿಸಿ ಮಾಡಿಕೊಳ್ಳಲಿ ಸುಳ್ಳು ಹೇಳಿಕೊಂಡು ಅಧಿಕಾರ ಮಾಡಿದ್ದೇ ಕಾಂಗ್ರೆಸ್ ಸಾಧನೆಯಾಗಿದೆ ಯಾವ ಮುಖ ಇಟ್ಟಿಕೊಂಡು ಕೋಲಾರಕ್ಕೆ ಬರುತ್ತಾರೆ ಎಂದು ಆರೋಪಿಸಿದರು.
ಕೋಲಾರದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ನಾಲ್ಕು ಜನ ಕಾಂಗ್ರೆಸ್ ಶಾಸಕರು ಹೇಳಿಕೊಂಡಿದ್ದರು ಎತ್ತಿನಹೊಳೆ, ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣ, ಇಂಜಿನಿಯರ್ ಕಾಲೇಜು, ಎಪಿಎಂಸಿಗೆ ಜಾಗ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಈ ಬಜೆಟ್‌ನಲ್ಲಿ ಜಾರಿಯಾಗುತ್ತದೆ ಎಂದು ಭಾವಿಸಲಾಗಿತ್ತು ಆದರೆ ಎಲ್ಲವೂ ನಿರಾಸೆಯಾಗಿದೆ ಎಂದು ಬಣಕನಹಳ್ಳಿ ನಟರಾಜ್ ಆರೋಪಿಸಿದರು.
ಚಿತ್ರ: ಬಣಕನಹಳ್ಳಿ ನಟರಾಜ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್