ಕೋಲಾರ, ಮಾರ್ಚ್ 0೭ (ಹಿ.ಸ.) :
ಆ್ಯಂಕರ್ : ಅಂಗವಿಕಲರೆಂದರೆ ಅನುಕಂಪ ಬೇಡ-ಅವಕಾಶ ನೀಡಿ, ಅಂಗವಿಕಲತೆ ಶಾಪವಲ್ಲ ಕೇವಲ ಆಕಸ್ಮಿಕವೆಂದು ಅನೇಕ ವಿವರಗಳನ್ನು ನೀಡಿ ಅರಿವು ಮೂಡಿದರು. ಅನೇಕ ಅಂಗವಿಕಲರು ಇಂದಿಗೂ ಶಿಕ್ಷಕರಾಗಿ, ಇತರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಗೌರವ ನೀಡಿ ಸಾಧನೆಗೆ ಅವಕಾಶ ನೀಡಿದರೆ ಖಂಡಿತವಾಗಿಯೂ ಸಾಧಿಸಿ ತೋರಿಸುತ್ತಾರೆಂದು ಎಂದು ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ(ಬಿಐಇಆರ್‌ಟಿ) ಚಂದ್ರಾರೆಡ್ಡಿ ಅಭಿಪ್ರಾಯಪಟ್ಟರು.
ಬೇತಮಂಗಲ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕೆಜಿಎಫ್ ತಾಲೂಕು ೨೦೨೪-೨೫ನೇ ಸಾಲಿನ ಬ್ಲಾಕ್ ಹಂತದ ಪ್ರಾಥಮಿಕ ಹಾಗೂ ಪೌಡ ಶಾಲಾ ವಿಶೇಷ ಚೇತನ ಮಕ್ಕಳ ಕ್ರೀಡೆ ಮತ್ತು ಅರಿವು ಮೂಡಿಸುವಿಕೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ೨೧ ವಿಭಾಗಗಳಾಗಿ ವಿಂಗಡನೆ ಮಾಡಿದ್ದು, ಕೆಜಿಎಫ್ ತಾಲೂಕಿನಲ್ಲಿ ೧೬ ಬಗೆಯ ನೂನ್ಯತೆಗಳ ಮಕ್ಕಳಿದ್ದು, ಒಟ್ಟು ೧೯೬ ವಿದ್ಯಾರ್ಥಿಗಳಿದ್ದು, ಈ ಭಾಗದ ೬ ಕ್ಲಸ್ಟರ್‌ಗಳ ಪೈಕಿ ೭೦ ಕ್ಕೂ ಅಧಿಕ ಮಕ್ಕಳು ಸೇರಿದ್ದು, ಈ ಎಲ್ಲಾ ವಿಶೇಷ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಕಾರ‍್ಯಕ್ರಮವನ್ನು ಶಾಲಾ ಶಿಕ್ಷಣ ಹಾಗೂ ಸಮಗ್ರ ಶಿಕ್ಷಣ ಇಲಾಖೆ ಮೂಲಕ ಅರಿವು ಮೂಡಿಸಿ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಕಾರ‍್ಯಕ್ರಮವಾಗಿದೆ ಎಂದರು.
ವಿಶೇಷ ಚೇತನರ ಮಕ್ಕಳಿಗೆ ಸ್ಕಾಲರ್‌ಶೀಪ್, ಇತರೆ ಸೌಲಭ್ಯಗಳು ಸರ್ಕಾರದಿಂದ ನೀಡಲಾಗುತ್ತಿದ್ದು, ತಾಲೂಕಿನ ೧೯೬ ಮಕ್ಕಳ ಪೈಕಿ ೧೫೬ ಮಕ್ಕಳಿಗೆ ಆಧಾರ್ ಕಾರ್ಡ್‌ನ ಅಡಿಯಲ್ಲಿ ನೇರವಾಗಿ ಹಣ ಸಂದಾಯ ವಾಗುತ್ತಿದೆ ಎಂದರು. ಕಂದಾಯ ಇಲಾಖೆ ಮೂಲಕವೂ ಪೆಕ್ಷನ್ ಇತರೆ ಸೌಲಭ್ಯವಿದೆ ಎಂದರು.
ಇದೇ ಶಾಲೆಯಲ್ಲಿ ಶಿಕ್ಷಕಿ ಮಂಜುಳ ಅಂಗವಿಕಲತೆಯಾಗಿದ್ದರೂ, ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಕೀಲರಿಮೆ ಇಲ್ಲ ಎಂದರು. ಅವರು ಸಹ ಮಾತನಾಢಿ, ತಾವು ಬೆಳೆದು ಬಂದ ಹಾದಿ ಮತ್ತು ಕಷ್ಟದ ದಿನಗಳನ್ನು ಈ ಮೂಲಕ ಮೆಲುಕು ಹಾಕಿದರು.
ವಿಶೇಷ ಚೇತನ ಮಕ್ಕಳಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಕಾರ‍್ಯಕ್ರಮದಲ್ಲಿ ಮಕ್ಕಳು ಚಿತ್ರಕಲೆ, ಪೈಂಟಿಂಗ್, ಕ್ಲೆಮಾಡೆಲಿಂಗ್, ಗಾಯನ ಸ್ಪರ್ದೆ, ಕಥೆ ಕೇಳುವುದು, ಕಿರು ನಾಟಕ, ಮೂಕಾಬಿನಯ, ರಸಪ್ರಶ್ನೆ, ಹಾಗೂ ಬಾಲ್ ಇನ್ ದ ಬಕೇಟ್, ಬಾಲ್ ಎಸೆತ, ಕುರ್ಚಿ ಇತ್ಯಾದಿ ಕಾರ‍್ಯಕ್ರಮಗಳನ್ನು ನಡೆಸಲಾಯಿತು. ನಂತರ ಮಕ್ಕಳಿಗೆ ಬಹುಮಾನ ವಿತರಣೆ ಕಾರ‍್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್, ಬಿಆರ್‌ಪಿ ಶಂಕರ್, ಕೃಷ್ಣಮೂರ್ತಿ, ಚಂದ್ರಾರೆಡ್ಡಿ, ಅಶ್ವಥ್, ಗಿರೀಶ, ಸುರೇಶ್, ಶ್ರೀನಿವಾಸ್, ರಾಮಚಂದ್ರಪ್ಪ, ಜಯಲಕ್ಷ್ಮೀ, ಸುಭ್ರಮಣಿ, ಧವನೇಶ್, ವೆಂಕಟೇಶ್, ರಾಮು, ಪ್ರಭಾಕರ್, ಸಂತೋಷ್ ಹಾಗೂ ೬ ಕ್ಲಸ್ಟರ್‌ನ ವಿಶೇಷ ಚೇತನರು, ಪೋಷಕರು ಭಾಗವಹಿಸಿದ್ದರು
ಚಿತ್ರ: ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಬೇತಮಂಗಲದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಪೌಡ ಶಾಲಾ ವಿಶೇಷ ಚೇತನ ಮಕ್ಕಳ ಕ್ರೀಡೆ ಮತ್ತು ಅರಿವು ಮೂಡಿಸುವಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ ಚಂದ್ರಾರೆಡ್ಡಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್