ಸರಕಾರಿ ಶಾಲೆಯ ಮಕ್ಕಳು ವಿಶೇಷ ಗುಣಗಳ‌ ಗಣಿ
ಬಳ್ಳಾರಿ, 07 ಮಾರ್ಚ್ (ಹಿ.ಸ.) : ಆ್ಯಂಕರ್ : ಸರಕಾರಿ ಶಾಲೆಯ ಮಕ್ಕಳಲ್ಲಿ ಇತರರಿಗಿಂತ ವಿಶೇಷ ಗುಣಗಳು ಅಡಕವಾಗಿರುತ್ತವೆ ಎಂದು ಜೋಳದರಾಳಿ ಜೆ.ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಸಮಾಜ ಸೇವಕ ತಿಮ್ಮಪ್ಪ ಜೋಳದರಾಶಿ ಅವರು ಹೇಳಿದರು. ನಗರದ‌ ಕೋಟೆ ಅಜಾದ್ ಸರಕಾರಿ ಪ್ರೌಢಶಾಲೆ, ಶ್ರೀರಾಪುರಂ ಸರಕಾರಿ
ಸರಕಾರಿ ಶಾಲೆಯ ಮಕ್ಕಳು ವಿಶೇಷ ಗುಣಗಳ‌ ಗಣಿ


ಸರಕಾರಿ ಶಾಲೆಯ ಮಕ್ಕಳು ವಿಶೇಷ ಗುಣಗಳ‌ ಗಣಿ


ಸರಕಾರಿ ಶಾಲೆಯ ಮಕ್ಕಳು ವಿಶೇಷ ಗುಣಗಳ‌ ಗಣಿ


ಬಳ್ಳಾರಿ, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಸರಕಾರಿ ಶಾಲೆಯ ಮಕ್ಕಳಲ್ಲಿ ಇತರರಿಗಿಂತ ವಿಶೇಷ ಗುಣಗಳು ಅಡಕವಾಗಿರುತ್ತವೆ ಎಂದು ಜೋಳದರಾಳಿ ಜೆ.ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಸಮಾಜ ಸೇವಕ ತಿಮ್ಮಪ್ಪ ಜೋಳದರಾಶಿ ಅವರು ಹೇಳಿದರು.

ನಗರದ‌ ಕೋಟೆ ಅಜಾದ್ ಸರಕಾರಿ ಪ್ರೌಢಶಾಲೆ, ಶ್ರೀರಾಪುರಂ ಸರಕಾರಿ ಪ್ರೌಢಶಾಲೆ, ಮುನಿಸಿಪಲ್ ಸರಕಾರಿ ಪ್ರೌಢಶಾಲೆ ಹಾಗೂ ತಾಲೂಕಿನ ಹಲಕುಂದಿ ಸಕಿಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ಉಚಿತವಾಗಿ ಪರೀಕ್ಷಾ ಪ್ಯಾಡ್ ಮತ್ತು ಪೆನ್ನುಗಳನ್ನು ವಿತರಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಏನಾದರೂ ಸಾಧಿಸ ಬಲ್ಲರು ಎಂದು ಪ್ರಶಂಸಿಸಿದರು.

ಸರಕಾರಿ ಶಾಲೆಯ ಅಧ್ಯಾಪಕರು ಪ್ರತಿಭಾವಂತರು. ಕಠಿಣ ಪರೀಕ್ಷೆ, ಸ್ಪರ್ಧೆಗಳನ್ನು ಎದುರಿಸಿ ಸರಕಾರಿ ಉದ್ಯೋಗ ಪಡೆದಿರುತ್ತಾರೆ. ಇಂತಹ ಪರಿಣಿತ ಅಧ್ಯಾಪಕರಿಂದ ಕಲಿತು ಜೀವನದಲ್ಲಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಮ್ಮಪ್ಪ ಕಿವಿ ಮಾತು ಹೇಳಿದರು.

ಬಡತನ,‌ಕಷ್ಟ ಕಾರ್ಪಣ್ಯ‌ ಅನುಭವಿಸಿ ವಿದ್ಯಾಭ್ಯಾಸ ಪಡೆದಿರುವ ತಾವು ತಾಲೂಕಿನ ಗ್ರಾಮೀಣ, ನಗರದ ಸರಕಾರಿ ಶಾಲೆಯ ‌ಮಕ್ಕಳಿಗೆ ನೆರವು ನೀಡುತ್ತಿದ್ದು, ಸಮಾಜ ಮುಖಿ ಕಾರ್ಯಗಳನ್ನು ಮುಂದಿನ ದಿನಗಳಲ್ಲೂ ಮುಂದುವರೆಸುತ್ತೇನೆ ಎಂದು ತಿಳಿಸಿದರು.

ಹಲಕುಂದಿ ಸಕಿಪ್ರಾ ಶಾಲೆ ದತ್ತು ಪಡೆದಿರುವ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಪ.ಜಾ. ಪ.ರ್ಗ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇವರಿಗೆ ತಿಮ್ಮಪ್ಪ ಅವರು ತಮ್ಮ ಫೌಂಡೇಶನ್ ಮೂಲಕ ನೆರವು ನೀಡುತ್ತಿರುವುದು ಮಾದರಿಯಾಗಿದೆ. ಇತರೆ ಪೆಟ್ರೋಲ್ ಬಂಕ್ ಮಾಲಿಕರು ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ನಿವೃತ್ತ ಮುಖ್ಯ ಗುರು ರುದ್ರಪ್ಪ, ಮುಖ್ಯಗುರುಗಳಾದ ಆನಂದ ನಾಯ್ಕ, ಕೆಂಚಪ್ಪ, ಅಧ್ಯಾಪಕಿ ಡಾ. ಸಿದ್ದೇಶ್ವರಿ ಮಾತನಾಡಿದರು.

ಮುಖಂಡರಾದ ರೂಪನಗುಡಿ ಗೋವಿಂದ. ಜನಾರ್ಧನ ನಾಯಕ, ಎನ್. ದುರುಗಪ್ಪ. ಏನ್.ಸತ್ಯನಾರಾಯಣ, , ಕೊಕ್ಕರ ಚೇಡು ತಿಮ್ಮಪ್ಪ, ಕಾಯಿಪಲ್ಲೆ ಬಸವರಾಜ. ರೂಪನಗುಡಿ ವೆಂಕಟೇಶ್. ವಿನಾಯಕನಗರ ನಾಗರಾಜ, ಪತ್ರಿಕಾ ಛಾಯಾಗ್ರಾಹಕ ರುದ್ರಮುನಿ ಸ್ವಾಮಿ, ಜೋಳದರಾಶಿ ತಿಕ್ಕಣ್ಣ. ಚಂದ್ರಶೇಖರ. ಮನೋಜ. ವಿನೋದ. ಶೇಕ್ಷವಲಿ. ಕೌಶಿಕ್. ಶೈಲೇಂದ್ರ ಸಾಯಿ(ಬನ್ನಿ), ಸುಧಾಕರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande