ಬಳ್ಳಾರಿ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡನೆ ಮಾಡಿರುವ 2025-26ರ ಸಾಲಿನ ಬಜೆಟ್‍ನಲ್ಲಿ ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿರುವುದು ಸ್ವಾಗತಾರ್ಹ.
ಜಿಡಿಪಿ ಬೆಳವಣಿಗೆಯು ರಾಷ್ಟ್ರಮಟ್ಟದಲ್ಲಿ ನೆಗೆಟಿವ್ ಇದ್ದರೂ, ಕರ್ನಾಟಕದಲ್ಲಿ ಶೇ. 7.4 ಬೆಳವಣಿಗೆ ಆಗುತ್ತಿದೆ. ಕೃಷಿ ಬೆಳವಣಿಗೆ ಶೇ. 4 ರಷ್ಟಿದೆ. ರೈಲ್ವೆಯ ಶೇ. 50-50ರ ಅನುದಾನದ 9 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕದಲ್ಲಿ 1856 ರಾಜ್ಯ ಹೆದ್ದಾರಿ, 2570 ಜಿಲ್ಲಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
`ಕರ್ನಾಟಕ ಇನ್ವೆಸ್ಟ್' ಮೂಲಕ 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಕರ್ನಾಟಕದಲ್ಲಿ ಹೂಡಿಕೆಯಾಗಿದ್ದು, 6 ಲಕ್ಷ ಉದ್ಯೋಗಳು ಸೃಷ್ಟಿಯಾಗಿವೆ. 60 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ಸೇರಿ ಕೃಷಿ, ವಿಜ್ಞಾನ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ, ಈ ಬಜೆಟ್ ಸರ್ವಜನರಿಗೆ ಸಮಪಾಲು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೈನರು, ಮುಸ್ಲಿಂಮರು, ಬೌದ್ಧರು ಸೇರಿ ಅಲ್ಪಸಂಖ್ಯಾತರರಿಗೆ ಆದ್ಯತೆ ನೀಡಿರುವ ಬಜೆಟ್ ಇದಾಗಿದೆ.
ಅಲ್ಲಂ ಪ್ರಶಾಂತ್
ಅಧ್ಯಕ್ಷರು
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬಳ್ಳಾರಿ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್