ನಿರಾಶೆದಾಯಕ ಬಜೆಟ್ : ರಾಜು ಕುರುಡಗಿ
ಗದಗ, 07 ಮಾರ್ಚ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ರವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಜ್ಯದ ಜನಕ್ಕೆ ನಿರಾಸೆ ಉಂಟು ಮಾಡಿದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರದ ಬಜೆಟ್ ಕುರಿತು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ 5 ಗ್
ಫೋಟೋ


ಗದಗ, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ರವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ರಾಜ್ಯದ ಜನಕ್ಕೆ ನಿರಾಸೆ ಉಂಟು ಮಾಡಿದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರದ ಬಜೆಟ್ ಕುರಿತು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳ ಜಾರಿಗೆ ಸಾಲ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಗ್ಯಾರಂಟಿ ಭಾರ ಇಳಿಸಲು ತೆರಿಗೆ ಹೆಚ್ಚಳ ಮಾಡಿ ಜನರಿಗೆ ಆರ್ಥಿಕ ಹೊರೆಯಾಗಿಸಿದ್ದು, ಚುನಾವಣೆಯ ಬಳಿಕ ಕಾಂಗ್ರೆಸ್ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ಉತ್ತರ ಕರ್ನಾಟಕದ ಅನೇಕ ಯೋಜನೆಗಳಿಗೆ ಬಜೆಟ್‍ನಲ್ಲಿ ಮನ್ನಣೆ ನೀಡಿಲ್ಲಾ ನೀರಾವರಿ ಯೋಜನೆಗಳಿಗೆ, ಕೈಗಾರಿಕೆಗಳಿಗೆ, ಕೃಷಿಕ ರೈತರಿಗೆ ಅನುಕೂಲಕರವಾಗುವ ಯಾವುದೇ ಯೋಜನೆಗಳು ಬಜೆಟ್‍ನಲ್ಲಿ ಕಂಡು ಬಂದಿಲ್ಲಾ. ಯುವಕ ಯುವತಿಯರಿಗೆ ಉದ್ಯೋಗ ಆಧಾರಿತ ಕೈಗಾರಿಕೆಗಳ ಯೋಜನೆ ಸೃಷ್ಠಿ ಶೂನ್ಯ. ಈ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರಿಗೆ ತೆರಿಗೆ ಕಟ್ಟುವ ಜನರಿಗೆ ಈ ಬಜೆಟ್‍ನಲ್ಲಿ ಅನ್ಯಾಯವಾಗಿದೆ. ಶಿಕ್ಷಣ, ಸಮಾಜದ ಸೇವೆ ಮಾಡುವ ಮಠ ಮಾನ್ಯಗಳಿಗೆ ಈ ಬಜೆಟ್‍ನಲ್ಲಿ ಯಾವುದೇ ಅನುದಾನವಿಲ್ಲ. ಕೇಂದ್ರದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ಈಗಾಗಲೇ ಹಣ ಮೀಸಲಿದ್ದು ಅದಕ್ಕೆ ಭರಿಸುವ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಯೋಜನೆ ಜಾರಿಗೆ ಮಾಡಲು ಈ ಬಜೆಟ್‍ನಲ್ಲಿ ಸ್ಪಷ್ಟನೆ ನೀಡಿಲ್ಲಾ. ರೈತರ ಮಕ್ಕಳಗೆ ಅನುಕೂಲಕರವಾದ ಯಾವುದೇ ಯೋಜನೆಗಳು ಕಂಡು ಬಂದಿಲ್ಲಾ. ಒಟ್ಟಾರೆ ಎಲ್ಲ ಕ್ಷೇತ್ರಗಳಲ್ಲಿ ತೆರಿಗೆ ಹೇರುವ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರಿದಂತಾಗಿದೆ. ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಈ ಬಜೆಟ್‍ನಲ್ಲಿ 50 ಸಾವಿರ ನಿಗಧಿ ಮಾಡಿದ್ದು, ರಾಜ್ಯದ ಅನೇಕ ಬಡಕುಟುಂಬಗಳಿಗೆ, ಕೂಲಿಕಾರರಿಗೆ, ರೈತರಿಗೆ ಈ ಯೋಜನೆ ಅನ್ವಯಿಸುವುದಿಲ್ಲಾ. ಅಲ್ಪಸಂಖ್ಯಾತರ ಓಲೈಕೆ ಮಾಡಿ ತೆರಿಗೆ ಕಟ್ಟುವ ಬಹುಸಂಖ್ಯಾತರಿಗೆ ಈ ಸರ್ಕಾರ ಚಿಪ್ಪು ಕೊಟ್ಟಿದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande