ಸುಳ್ಳು ಭರವಸೆಗಳ ಬೋಗಸ್ ಬಜೆಟ್ : ಎಂ.ಎಂ.ಹಿರೇಮಠ
ಗದಗ, 07 ಮಾರ್ಚ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗು ಹಣಕಾಸು ಸಚಿವರಾದ ಸಿದ್ಧರಾಮಯ್ಯನವರು ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರವು ಸುಳ್ಳುಗಳ ಸರಮಾಲೆಯಾಗಿದ್ದು, ಯಾವುದೇ ಅಭಿವೃದ್ಧಿ ಇಲ್ಲದ ಇದೊಂದು ಬೋಗಸ್ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿ
ಪೋಟೋ


ಗದಗ, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗು ಹಣಕಾಸು ಸಚಿವರಾದ ಸಿದ್ಧರಾಮಯ್ಯನವರು ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರವು ಸುಳ್ಳುಗಳ ಸರಮಾಲೆಯಾಗಿದ್ದು, ಯಾವುದೇ ಅಭಿವೃದ್ಧಿ ಇಲ್ಲದ ಇದೊಂದು ಬೋಗಸ್ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ರಾಜ್ಯದ ಬಜೆಟ್‍ನ್ನು ಟೀಕಿಸಿದ್ದಾರೆ.

ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣೆಯಲ್ಲಿ ಆಯ್ಕೆಯಾಗಲು 5 ಗ್ಯಾರಂಟಿಗಳನ್ನ ಘೋಷಿಸಿದ್ದರು. ಆ ಗ್ಯಾರಂಟಿಗಳನ್ನು ಕೊಡಲು ವರ್ಷಕ್ಕೆ ಸುಮಾರು 60 ಸಾವಿರ ಕೋಟಿ ಬೇಕಾಗುತ್ತದೆ. ಕಳೆದ 5-6 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಂಪೂರ್ಣವಾಗಿ ವಿಫಲವಾಗಿದೆ. ಅನೇಕ ಸುಳ್ಳು ಭರವಸೆಗಳನ್ನು ನೀಡಿ ಜನರ ಮೂಗಿಗೆ ತುಪ್ಪವನ್ನು ಸವರುವ ಮುಂಗಡ ಪತ್ರವಾಗಿದೆ. ರಾಜ್ಯದ ಜನರ ನೀರಿಕ್ಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವರು.

ಕಳೆದ 1 ವರ್ಷದಲ್ಲಿ ರಾಜ್ಯದ ಮುಖ್ಯಮಂತ್ರಿಗಳು 1 ಲಕ್ಷ 16 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ಮಾಡಿದ್ದು ಇದೂವರೆಗಿನ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳ ದಾಖಲೆಗಳನ್ನು ಸಿದ್ಧರಾಮಯ್ಯನವರು ಸಾಲವನ್ನು ತರುವಲ್ಲಿ ಮೀರಿಸಿದ್ದಾರೆ. ಕಳೆದ ಬಾರಿ ಘೋಷಿಸಿದ ಶೇ 75% ರಷ್ಟು ಯೋಜನೆಗಳು ಒಂದು ವರ್ಷವಾದರು ಕೂಡಾ ಜಾರಿಗೆ ಬಂದಿಲ್ಲಾ. ಕಳೆದ ಬಾರಿ ನಿಗಮ ಮಂಡಳಿಗಳಿಗೆ ಇಟ್ಟಿದ್ದ ಅನುದಾನದಲ್ಲಿ ಶೇ 25% ರಷ್ಟನ್ನು ಮಾತ್ರ ಬಿಡುಗಡೆ ಮಾಡಿರುವರು. ಈ ಬಾರಿಯ ಮುಂಗಡ ಪತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ರಂಜಾನ್ ಹಬ್ಬದ ಕೊಡುಗೆಯನ್ನು ನೀಡಿರುವರು. ಅಲ್ಪಸಂಖ್ಯಾತರ ಕಾಲೂನಿಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ರೂಪಾಯಿ, 100 ಅಲ್ಪಸಂಖ್ಯಾತರ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ, ವಕ್ಫ ಆಸ್ತಿ ರಕ್ಷಣೆಗಾಗಿ 150 ಕೋಟಿ ರೂಪಾಯಿ, ಗುತ್ತಿಗೆಯಲ್ಲಿ 2 ಕೋಟಿ ರೂಪಾಯಿನ ಕಾಮಗರಿಗಳಿಗೆ 4% ಮಿಸಲಾತಿ, 2,500 ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗೆ ವಿಶೇಷ ಅನುದಾನ, ಸರಳವಾಗಿ ಮದುವೆಯಾಗುವ ಮುಸ್ಲಿಂ ಮಹಿಳೆಯರ ಮದುವೆಗೆ 50 ಸಾವಿರ ರೂಪಾಯಿ ಈ ರೀತಿಯಾಗಿ ಅಲ್ಪಸಂಖ್ಯಾತರನ್ನ ತುಷ್ಟಿಕರಣಗೊಳಿಸಿದ್ದಾರೆ.

ರಾಜ್ಯದ ಕಾಂಗ್ರೇಸ್ ಶಾಸಕರೆ ಕಳೆದ 2 ವರ್ಷಗಳಿಂದ ರಾಜ್ಯದಿಂದ ಯಾವುದೇ ಅಭಿವೃದ್ಧಿಗೆ ಹಣವನ್ನು ಕೊಟ್ಟಿರುವುದಿಲ್ಲಾ ಎಂದು ಬಹಿರಂಗವಾಗಿ ಹೇಳುತ್ತಿರುವರು. ಈ ಬಾರಿಯೂ ಅನೇಕ ಯೋಜನೆಗಳ ಘೋಷಣೆಗಳನ್ನು ಮಾಡಿದ್ದು ರಾಜ್ಯದ ಬೊಕ್ಕಸದಲ್ಲಿ ಹಣವೇ ಇಲ್ಲಾ. 2 ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಗಳು 3 ಲಕ್ಷ ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿರುವರು. ಇದೊಂದು ಕಣ್ಣೊರೆಸುವ ಬಜೆಟ್ ಆಗಿದ್ದು ರಾಜ್ಯದ ಜನರಿಗೆ ಯಾವುದೇ ರೀತಿಯ ಅನುಕೂಲ ಇರುವುದಿಲ್ಲಾ ಎಂದು ಎಂ.ಎಂ.ಹಿರೇಮಠರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande