ಬಂಪರ್ ಕೊಡುಗೆ : ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಬಜೆಟ್‌ನಲ್ಲಿ ಕೋಲಾರಕ್ಕೆ ಬಂಪರ್ ಕೊಡುಗೆ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ
ಚಿತ್ರ: ಕೋಲಾರ ಜಿಲ್ಲೆಗೆ ಸರ್ಕಾರದಿಂದ ಘೋಷಣೆಯಾದ ಯೋಜನೆಗಳಿಗೆ ಕಾಂಗ್ರೇಸ್ ಕಾರ್ಯರ್ಕತರು ಮುಖಂಡರು ನಗರದ ಪಲ್ಲವಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.


ಕೋಲಾರ, ಮಾರ್ಚ್ 0೭ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಕೆಜಿಎಫ್ ಹೈಟೆಕ್ ಮಾರುಕಟ್ಟೆ ಸೇರಿದಂತೆ ಬಂಪರ್ ಕೊಡುಗೆ ನೀಡಿದ್ದು ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಕಾಂಗ್ರೆಸ್ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣದಲ್ಲಿ ವಿಜಯೋತ್ಸವ ಆಚರಿಸಿದರು.

ಮುಖಂಡರು ಕೋಲಾರದಲ್ಲಿ ಜನರ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಈ ಬಾರಿ ಜಾರಿ ಮಾಡಲಾಗಿದೆ ಅದೇ ರೀತಿ ಸುಮಾರು ೩೧೯೦ ಕೋಟಿ ವೆಚ್ಚದ ದೇವನಹಳ್ಳಿ ಹೊಸೂರು ರಸ್ತೆಗೆ ಅನುಮತಿ ನೀಡಲಾಗಿದೆ ಕೆಜಿಎಫ್ ತಾಲ್ಲೂಕಿನಲ್ಲಿ ರೈತರ ಅತ್ಯಾಧುನಿಕ ಮಾರುಕಟ್ಟೆ ಸ್ಥಾಪನೆಯ ಘೋಷಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಜೆಟ್ ಇದಾಗಿದೆ ಕೃಷಿ ನೀರಾವರಿ ಗ್ರಾಮೀಣ ಅಭಿವೃದ್ಧಿ ಮೂಲಸೌಕರ್ಯ ಸಮಾಜ ಕಲ್ಯಾಣ ಶಿಕ್ಷಣ ಆರೋಗ್ಯ ಉದ್ಯೋಗ ಸೃಷ್ಠಿ ರೈತರಿಗೆ ಸಹಕಾರಿ ಬಟೆಟ್ ಪಂಚ ಗ್ಯಾರಂಟಿಗಳ ಜೊತೆಗೆ ಆರ್ಥಿಕ ಸಮತೋಲನ ಕಾಳಜಿಯೊಂದಿಗೆ ಸರ್ವ ಸ್ಪರ್ಶಿ ಹಾಗೂ ಸಮಾನತೆಯನ್ನು ಸಾಧಿಸಿದ್ದಾರೆ ಇದಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರು ಕಾರಣವಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು

ವಿಜಯೋತ್ಸವದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಸದಸ್ಯರಾದ ಅಂಬರೀಷ್, ಸೂರಿ, ಅಮರನಾಥ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆಫ್ರಿದ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಷಂಷೀರ್, ಮಹಮ್ಮದ್ ಖಯ್ಯಾಮ್, ಚಂದ್ರಮೌಳಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕುರಿಗಳ ರಮೇಶ್, ಮುಂತಾದವರು ಭಾಗವಹಿಸಿದ್ದರು.

ಚಿತ್ರ: ಕೋಲಾರ ಜಿಲ್ಲೆಗೆ ಸರ್ಕಾರದಿಂದ ಘೋಷಣೆಯಾದ ಯೋಜನೆಗಳಿಗೆ ಕಾಂಗ್ರೇಸ್ ಕಾರ್ಯರ್ಕತರು ಮುಖಂಡರು ನಗರದ ಪಲ್ಲವಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande