ರಾಯಚೂರು, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾ.09ರ ಬೆಳಿಗ್ಗೆ 6.30ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫ್ರೀ ಕರ್ನಾಟಕ ಫಿಟ್‍ನೆಸ್ ಫಾರ್ ಆಲ್ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮ ಥೀಮ್‍ನಡಿಯಲ್ಲಿ ಕರ್ನಾಟಕ ಪೊಲೀಸ್ ರನ್-2025 ಮ್ಯಾರಾಥಾನ್ 5 ಕಿ.ಮೀ ಓಟವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಪುಟ್ಟಮಾದಯ್ಯ ಅವರು ಕೋರಿದ್ದಾರೆ.
ಅಂದು ಮ್ಯಾರಾಥಾನ್ ಓಟವು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿ ಬಸವೇಶ್ವರ ವೃತ್ತ, ಚಂದ್ರಮೌಶ್ವರ ವೃತ್ತ, ಗಂಜ್ ಸರ್ಕಲ್‍ನಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಯವಾಗೊಳ್ಳಲಿದೆ.
ಮ್ಯಾರಾಥಾನ್‍ನಲ್ಲಿ ಭಾಗವಹಿಸುವವರು ಮಾ.8ರೊಳಗಾಗಿ ತಮ್ಮ ಹೆಸರಗಳನ್ನು ರಾಯಚೂರಿನ ಡಿಎಆರ್ ಘಟಕದ ಶ್ರೀ ಭೀರಣ್ಣ ಆರ್.ಎಸ್.ಐ ದೂರವಾಣಿ ಸಂಖ್ಯೆ: 7676869654, ಆರ್.ಎಸ್.ಐ ಅಮರೇಶ ದೂರವಾಣಿ ಸಂಖ್ಯೆ: 9916615968ಗೆ ಸಂಪರ್ಕ ಮಾಡಿ ಹೆಸರನ್ನು ನೋಂದಯಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್