ಬಡ್ಡಿ ದಂಧೆಕೋರರ ವಿರುದ್ಧ ಪ್ರತಿಭಟನೆ
ಗದಗ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ವಿರುದ್ಧ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದು. ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆ ಮಾಡುತ್ತಿದ್ದ ಯಲ್ಲಪ್ಪ‌ ಮಿಸ್ಕಿನ್ ಮೇಲೆ ಇತ್ತಿಚೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ
Protest


ಗದಗ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ವಿರುದ್ಧ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಇಂದು ಪ್ರತಿಭಟನೆ ನಡೆಸಿದು.

ಗದಗ ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆ ಮಾಡುತ್ತಿದ್ದ ಯಲ್ಲಪ್ಪ‌ ಮಿಸ್ಕಿನ್ ಮೇಲೆ ಇತ್ತಿಚೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಹಣ ಹಾಗೂ ಖಾಲಿ ಚೆಕ್, ಖಾಲಿ ಬಾಂಡ್, ಸೇರಿದಂತೆ ಬಂಗಾರವನ್ನು ವಶಕ್ಕೆ ಪಡೆದಿದ್ದರು. ಆದರು ಆತ ಹಣ ವಸೂಲಿ ಮಾಡುವಾಗ ಕಿರುಕುಳ ನೀಡುತ್ತಿದ್ದಾನೆ ಎಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆರೋಪ ಮಾಡಿದ್ದಾರೆ.

ಯಲ್ಲಪ್ಪ‌ ‌ಮಿಸ್ಕಿನ್ ಸೇರಿದಂತೆ ಅವರ ಗುಂಪಿನ ಭಾವಚಿತ್ರವನ್ನು ಹಿಡಿದು, ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯಲ್ಲಪ್ಪ‌ ಮಿಸ್ಕಿನ್ ಅವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande