ಬಳ್ಳಾರಿ, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಪ್ರಾಥಮಿಕ ಸಹಕಾರ ಗ್ರಾಮೀಣ ಕೃಷಿ ಅಭಿವೃದ್ಧಿ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಕೊರಲಗುಂದಿಯ ವಿ. ದೊಡ್ಡ ಕೇಶವರೆಡ್ಡಿ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು ನಡೆದ 12 ಜನ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಕೊರಲಗುಂದಿಯ ವಿ. ದೊಡ್ಡ ಕೇಶವರೆಡ್ಡಿ ಅವರ ಪರವಾಗಿ ಏಳು ನಿರ್ದೇಶಕರಿದ್ದರು. ಈ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿ. ದೊಡ್ಡ ಕೇಶವರರೆಡ್ಡಿ ಅವರು, ಪಿಎಲ್‍ಡಿ ಬ್ಯಾಂಕಿನಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಮತ್ತು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುವೆ ಎಂದರು.
ವಿ. ದೊಡ್ಡಕೇಶವ ರೆಡ್ಡಿ ಅವರನ್ನು ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಹಾನಗರ ಪಾಲಿಕೆ ಸದಸ್ಯ, ಜನತಾಬಜಾರ್ ನಿರ್ದೇಶಕ ಶ್ರೀನಿವಾಸ ಮೋತ್ಕರ್, ಜನತಾ ಬಜಾರ್ ಅಧ್ಯಕ್ಷ ಕೆ.ಎ. ವೇಮಣ್ಣ, ಉಪಾಧ್ಯಕ್ಷ ಮುಜಾಯಿದ್, ನಿರ್ದೇಶಕ ನರೇಶ್ ಕುಮಾರ್, ಪರಿಣಿತ ಸದಸ್ಯ, ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್, ಮುಖಂಡರಾದ ಇಬ್ರಾಹಿಂ ಇನ್ನಿತರರು ಅನೇಕರು ಅಭಿನಂದಿಸಿ, ಶುಭ ಹಾರೈಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್