ಕೋಲಾರ, ಮಾರ್ಚ್ 0೬ (ಹಿ.ಸ.):
ಆ್ಯಂಕರ್ : ಸರ್ಕಾರಿ ಜಮೀನಿನಲ್ಲಿ ಸ್ವಾಧೀನದಲ್ಲಿರುವ ರೈತರು ಭೂ ಮಂಜೂರಾತಿಗಾಗಿ ಫಾರಂ ನಂಬರ್ ೫೩, ೫೭ ಏಳು ಸಾವಿರ ಅರ್ಜಿಗಳು ಬಾಕಿ ಉಳಿದಿದ್ದು, ದರಖಾಸ್ತು ಸಮಿತಿ ಅಧ್ಯಕ್ಷರು ಸದಸ್ಯರು ೧೫ ದಿನಗಳಿಗೊಮ್ಮೆ ಸಭೆ ನಡೆಸಿ ಅರ್ಜಿಗಳನ್ನು ಹಂತ ಹಂತವಾಗಿ ವಿಲೇ ಮಾಡಲು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕ ಕೆ ವೈ ನಂಜೇಗೌಡ ಹೇಳಿದರು.
ಮಾಲೂರು ಪಟ್ಟಣದ ತಾಲೂಕು ಕಚೇರಿಯ ತಹಸಿಲ್ದಾರ್ ಸಭಾಂಗಣದಲ್ಲಿ ದರಖಾಸ್ತು ಸಮಿತಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಬುದ್ಧ ಸ್ವಾಧೀನದಲ್ಲಿರುವ ರೈತರು ಭೂ ಮಂಜೂರಾತಿಗಾಗಿ ರೂ.೭,೦೦೦ ಅರ್ಜಿಗಳನ್ನು ಸಲ್ಲಿಸಿದ್ದಾರೆ ಆ ಅರ್ಜಿಗಳು ಬಾಕಿ ಉಳಿದಿದ್ದು, ಅತಿ ವೇಗವಾಗಿ ವಿಲೇ ಮಾಡಲು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದರಖಾಸ್ತು ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಸಭೆ ನಡೆಸಿ ಫಾರಂ ನಂಬರ್ ೫೩, ೫೭ರ ಅರ್ಜಿಗಳನ್ನು ವಿಲೆ ಮಾಡುವಂತೆ ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ಏಳರಂದು ಬಜೆಟ್ ಮಂಡನೆ ಮಾಡಲಿದ್ದು ಜಿಲ್ಲೆ ಹಾಗೂ ತಾಲೂಕಿಗೆ ಒಳ್ಳೆ ಅವಕಾಶಗಳಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಕಳೆದ ಬಜೆಟ್ ನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ರಸ್ತೆಗಾಗಿ ೩೬೦೦ ಕೋಟಿ ರೂಗಳನ್ನು ನಿಗದಿಪಡಿಸಲಾಗಿತ್ತು ಅದರಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎರಡು ಪ್ಯಾಕೇಜ್ ಗಳಲ್ಲಿ ವೇಮಗಲ್ ನಿಂದ ತಮಿಳುನಾಡು ಗಡಿಯ ಸಂಪಂಗೆರೆ ವರೆಗೆ ಮಾಲೂರು ಹೊಸಕೋಟೆ ಪಟ್ಟಣದಲ್ಲಿ ಹಾದು ಹೋಗುವ ಫ್ಲೈ ಓವರ್ ಸೇರಿದಂತೆ ಒಟ್ಟು ಎರಡು ನೂರು ಕೋಟಿ ತಾಲೂಕಿಗೆ ಬರಲಿದೆ ಮುಖ್ಯಮಂತ್ರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ತಾಲೂಕು ಸಹ ಒಳ್ಳೆಯ ಅವಕಾಶಗಳನ್ನು ಮುಖ್ಯಮಂತ್ರಿಗಳ ಬಳಿ ಕೇಳಿದ್ದು, ನಾಳೆ ಮಂಡಿಸಲಿರುವ ಬಜೆಟ್ ನಲ್ಲಿ ಪಟ್ಟಣದಲ್ಲಿ ಈಗಿರುವ ಆಸ್ಪತ್ರೆ ಶಿಥಿಲ ಹಾಗೂ ಕಿರಿದಾಗಿರುವುದರಿಂದ ನೂತನ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಬಜೆಟ್ ನಲ್ಲಿ ೪೦ ಕೋಟಿ ರೂಗಳನ್ನು ನೂತನ ಆಸ್ಪತ್ರೆಗಾಗಿ ಮಂಜೂರು ಮಾಡಲಿದ್ದಾರೆ. ಪಟ್ಟಣದಲ್ಲಿ ಈಗಾಗಲೇ ಬಸ್ ನಿಲ್ದಾಣವನ್ನು ೨೧ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಕೆರೆ ಅಭಿವೃದ್ಧಿಯನ್ನು ಯೋಜನಾ ಪ್ರಾಧಿಕಾರದ ೩೫ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಅಲ್ಲದೆ ಗ್ರಾಮೀಣ ರಸ್ತೆಗಳಿಗೆ ೨೦ ಕೋಟಿ ರೂಗಳು ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ೨೦ ಕೋಟಿ ರೂಗಳು ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷರಾದ ಎಚ್.ಹನುಮಂತಪ್ಪ, ಎಸ್. ಸಿ.ನಾರಾಯಣಸ್ವಾಮಿ, ಸದಸ್ಯ ಕಾರ್ಯದರ್ಶಿ ತಹಶೀಲ್ದಾರ್ ಎಂ.ವಿ.ರೂಪ, ಸದಸ್ಯರಾದ ಬನಹಳ್ಳಿ ಸತೀಶ್, ನಾಗಪುರ ನವೀನ್ ಕುಮಾರ್, ಎಟ್ಟಕೋಡಿ ವೀರಭದ್ರಪ್ಪ, ಗೋಪಿನಾಥ್, ಧನಲಕ್ಷ್ಮೀ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಚಿತ್ರ: ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ದಕಾಸ್ತು ಸಭೆಯಲ್ಲಿ ಶಾಸಕ ಕೆವೈ ನಂಜೇಗೌಡ ಹಾಗೂ ಇತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್