ಕೋಲಾರ, ಮಾರ್ಚ್ 0೬ (ಹಿ.ಸ.) :
ಆ್ಯಂಕರ್ : ಪೊಲೀಸರ ಹೆಸರನ್ನು ಬಳಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಆರೋಪಿ ಪವನ್ ೨೫ ವರ್ಷ ಮಾಲೂರು ಪೋಸರು ಬಂಧಿಸಿದ್ದಾರೆ.
ಬಜಾಜ್ ಫೈನಾನ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪವನ್ ಬಂಗಾರಪೇಟೆಯ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ, ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹರೀಶ ವಿ ಎಂಬುವವರು ಮಾಲೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ್ವಯ ನನ್ನ ತಾಯಿ ಮೃತಪಟ್ಟಿದ್ದು, ಆ ಸಮಯದಲಿ ತನಗೆ ಹಣದ ಅವಶ್ಯಕತೆ ಇದ್ದ ಕಾರಣ ಮಾಲೂರಿನ ಬಜಾಜ್ ಫೈನಾನ್ಸ್ ನಿಂದ ವೈಯಕ್ತಿಕ ಸಾಲವಾಗಿ ೧,೧೪,೬೩೬ರೂಗಳನ್ನು ಪಡೆದಿದ್ದರು. ಪ್ರತಿ ತಿಂಗಳು ಕಂತನ್ನು ಪಾವತಿ ಮಾಡಿದ್ದರೂ ಸಹ ಫೆ.೧೪ ರಂದು ಸಂಜೆ ತನ್ನ ಮೊಬೈಲ್ ಸಂಖ್ಯೆಗೆ ಯಾರೋ ಒಬ್ಬರು ನಾವು ಕೋಲಾರ ಪೊಲೀಸರು ನೀನು ಬಜಾಜ್ ಫೈನಾನ್ ನಲ್ಲಿ ಸಾಲ ಮಾಡಿ ಹಣ ಪಾವತಿ ಮಾಡಿಲ್ಲ ಹಾಗಾಗಿ ನಿನ್ನ ಚೆಕ್ ಬೌನ್ಸ್ ಆಗಿದೆ ಎಂದು ಜೋರಾಗಿ ಮಾತನಾಡಿದ್ದರು.
ನಾನೂ ವಕೀಲರ ಬಳಿ ಮಾತನಾಡಿರುವುದಾಗಿ ಹೇಳಿದ್ದು, ಉಳಿದ ಹಣವನ್ನು ಬೇಗನೆ ಕಟ್ಟುವುದಾಗಿ ಹೇಳಿದರೂ ಸಹ ತುಂಬಾ ಕೆಟ್ಟಪದಗಳ ಬಳಕೆ ಮಾಡುತ್ತ ಜೋರಾದ ಧ್ವನಿಯಲ್ಲಿ ಮಾತನಾಡಿದ್ದಾರೆ. ನನಗೆ ಕಿರುಕುಳ ನೀಡಿದ್ದಲ್ಲದೆ ಹಲವಾರು ಮೊಬೈಲ್ ಸಂಖ್ಯೆಗಳಿಂದ ನನಗೆ ಕರೆ ಮಾಡಿ ಅವಾಚ್ಯ ಪದಗಳನ್ನು ಉಪಯೋಗಿಸಿ ಧಮ್ಮಿ ಹಾಕಿರುವುದಾಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರುನ್ನ ನೀಡಿದ್ದ ಹರೀಶ್ ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಮಾಲೂರು ಪಿ.ಐ ವಸಂತ್ ಪಿ.ಎಸ್.ಐ ವರಲಕ್ಷ್ಮಮ್ಮ ಪಿ.ಎಸ್.ಐ ಗೀತಮ್ಮ ಮತ್ತು ಸಿಬ್ಬಂದಿಯವರಾದ ರೇಣುಪ್ರಸಾದ್, ಮೋಹನ್ ಮತ್ತು ಆಶೋಕ್ ತಂಡವು ತಲೆಮರೆಸಿಕೊಂಡಿದ್ದ ಆರೋಪಿ ಪವನ್ ಬಿನ್ ಗುರಪ್ಪ ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆಯ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ, ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
ಚಿತ್ರ: ಪವನ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್