ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ಜನಜಾತ್ರೆ
ರಾಯಚೂರು, 06 ಮಾರ್ಚ್ (ಹಿ.ಸ.) : ಆ್ಯಂಕರ್ : ರಾಯಚೂರ ನಗರದಲ್ಲಿ ಗುರುವಾರ ನಡೆದ ರಾಯಚೂರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅಕ್ಷರಶಃ ಜನಜಾತ್ರೆಯಾಗಿ ಯಶ ಕಂಡಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಸಾಹಿ
ರಾಯಚೂರು: ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ಜನಜಾತ್ರೆ


ರಾಯಚೂರು: ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ಜನಜಾತ್ರೆ


ರಾಯಚೂರು: ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ಜನಜಾತ್ರೆ


ರಾಯಚೂರು, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ರಾಯಚೂರ ನಗರದಲ್ಲಿ ಗುರುವಾರ ನಡೆದ ರಾಯಚೂರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅಕ್ಷರಶಃ ಜನಜಾತ್ರೆಯಾಗಿ ಯಶ ಕಂಡಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಸಾಹಿತಿಗಳು, ಶಿಕ್ಷಕರು, ನೌಕರರು, ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಮೆರವಣಿಗೆ; ರಾಯಚೂರು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಾಹಿತಿ ಅಯ್ಯಪ್ಪಯ್ಯ ಹುಡಾ ದಂಪತಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ನಾಡದೇವಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ರಂಗಮಂದಿರದವರೆಗೆ ವರ್ಣರಂಜಿತವಾಗಿ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಆಕಣಿ ಹಲಗೆ, ಹಗಲು ವೇಷ ತಂಡಗಳು ಭಾಗವಹಿಸಿದ್ದವು. ಈ ವರ್ಣರಂಜಿತ ಕನ್ನಡದ ತೇರಿಗೆ ಕನ್ನಡದ ಸಾವಿರಾರು ಮನಸ್ಸುಗಳು ಸಾಕ್ಷಿಯಾದವು.

ಆಯುಕ್ತರಿಂದ ಧ್ವಜಾರೋಹಣ; ರಾಯಚೂರು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ರಂಗಮಂದಿರದ ಆವರಣದಲ್ಲಿ ನೆರವೇರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಂಗಣ್ಣ ಪಾಟೀಲ ಅಳ್ಳುಂಡಿ ಅವರು ನಾಡಧ್ವಜವನ್ನು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಬಳಿಕ ರಂಗಮಂದಿರದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮಕ್ಕೆ ನಾಡೋಜ ಡಾ.ಗೋ.ರು.ಚನ್ನಬಸಪ್ಪ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಸಾಹಿತಿಗಳೊಂದಿಗೆ ಬೆರೆತ ಸಂಸದರು: ರಾಯಚೂರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ಜಿ.ಕುಮಾರನಾಯಕ ಅವರು ಉಪಸ್ಥಿತರಿದ್ದು ಸಾಹಿತಿ ಗೋ.ರು.ಚ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರ ಮಾತುಗಳನ್ನು ಕೇಳಿದರು. ಸಮಾರಂಭ ಮುಕ್ತಾಯವಾಗುವವರೆಗೆ ವೇದಿಕೆಯಲ್ಲಿಯೇ ಆಸೀನರಾಗಿ ಕಾರ್ಯಕ್ರಮದ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿದರು.

ರಂಗಮಂದಿರದಲ್ಲಿ ತುಂಬಿದ ಜನರು: ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ರಾಯಚೂರ ನಗರದಲ್ಲಿನ ರಂಗಮಂದಿರದ ಆವರಣವನ್ನು ಅಲಂಕಾರಗೊಳಿಸಲಾಗಿತ್ತು. ಸಮ್ಮೇಳನ ಹಿನ್ನೆಲೆಯಲ್ಲಿ ಶಿಕ್ಷಕರು, ಸಾಹಿತಿಗಳು ಬೆಳಗ್ಗೆಯಿಂದಲೇ ರಂಗಮಂದಿರದತ್ತ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು. ರಂಗಮಂದಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಈ ಸಮ್ಮೇಳನದ ವಿಶೇಷತೆಯಾಗಿತ್ತು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ: ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ರಂಗಮಂದಿರದಿಂದ ಅಣತಿ ದೂರದಲ್ಲಿನ ಶಾಲಾ ಆವರಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಿಸಲಿನ ಹಿನ್ನೆಲೆಯಲ್ಲಿ ಪೆಂಡಾಲ ಅಳವಡಿಸಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಜಾಮೂನು, ಗೋದಿ ಹುಗ್ಗಿ, ಬಜಿ, ಪೂರಿ, ಅನ್ನ ಸಾಂಬಾರ, ಮಜ್ಜಿಗೆ ಬಡಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande