ಐದು ತಿಂಗಳ ಬಾಣಂತಿ ಅನುಮಾನಾಸ್ಪದ ಸಾವು
ಗದಗ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಐದು ತಿಂಗಳ‌ ಬಾಣಂತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪವಿತ್ರಾ ಕಲ್ಲಕುಟಿಕರ್ 25 ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಣಂತಿಯಾಗಿದ್ದು, ತವರು ಮನೆಯಿಂದ ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರಾ ಸ
ಫೋಟೋ


ಗದಗ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಐದು ತಿಂಗಳ‌ ಬಾಣಂತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪವಿತ್ರಾ ಕಲ್ಲಕುಟಿಕರ್ 25 ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಣಂತಿಯಾಗಿದ್ದು, ತವರು ಮನೆಯಿಂದ ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರಾ ಸಾವನ್ನಪ್ಪಿದ್ದಾಳೆ.

ಪವಿತ್ರಾ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಕುತ್ತಿಗೆ ಹಿಸುಕಿ ನೇಣು ಬಿಗಿದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಪವಿತ್ರಾ ಗಂಡ ಹರೀಶ್ ಕಲ್ಲಕುಟಿಕರ್, ಮಾವ ಮೂಕಪ್ಪ, ಅತ್ತೆ ಸೋಮವ್ವ ಇವರ ಮೇಲೆ ಕೊಲೆ ಆರೋಪ ಕೇಳಿ‌ ಬಂದಿದೆ.

ಸೊಸೆ ಪವಿತ್ರಾಳಿಗೆ ವರದಕ್ಷಿಣೆ ಹಣ ತರುವಂತೆ ನಿತ್ಯ ಕಿರುಕುಳ ನೀಡುತ್ತಿದ್ದ ಆರೋಪವಿದ್ದು, ನಿನ್ನೆ ಸಂಜೆ ಮನೆಯಲ್ಲಿ ಪವಿತ್ರಾ ಮೇಲೆ ಹಲ್ಲೆ ಮಾಡಿ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗಿದೆ. ಬಾಣಂತಿ ಸಾವಿನಿಂದ ಹಸುಗೂಸು ಅನಾಥವಾಗಿದ್ದು, ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವರದಕ್ಷಿಣೆ ಕಿರುಕುಳ ಹಿನ್ನೆಲೆ ಕೊಲೆ ಪವಿತ್ರಾಳ ಕುಟುಂಬಸ್ಥರು ಎಂದು ದೂರು ದಾಖಲಿಸಿದ್ದು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande