ಮಕ್ಕಳಿಗೆ ಸಂಸ್ಕಾರ ಕಲಿಸಬೇಕು: ಶಿವಕುಮಾರ ಸ್ವಾಮಿಜಿ
ಗದಗ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಪಾಲಕರಾದವರು ಮಕ್ಕಳಿಗೆ ಸಂಪತ್ತಿನ ಬಗ್ಗೆ ಹೇಳದೇ ಸಂಬಂಧದ ಬಗ್ಗೆ ತಿಳಿಸಿರಿ.ನಿಮ್ಮ ಮಕ್ಕಳಿಗೆ ಹಣ ಗಳಿಸೋದನ್ನ ಹೇಳಿಕೊಡುವದಕ್ಕಿಂತ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿರಿ.ಅಂದಾಗ ಗೌರವ, ಹಣ ಎರಡೂ ನಿಮ್ಮದಾಗುತ್ತವೆ ಎಂದು ಕಪ್ಪತ್ತಗುಡ್ಡದ ನಂದಿವೇರಿಮಠದ ಶ್
ಫೋಟೋ


ಗದಗ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಪಾಲಕರಾದವರು ಮಕ್ಕಳಿಗೆ ಸಂಪತ್ತಿನ ಬಗ್ಗೆ ಹೇಳದೇ ಸಂಬಂಧದ ಬಗ್ಗೆ ತಿಳಿಸಿರಿ.ನಿಮ್ಮ ಮಕ್ಕಳಿಗೆ ಹಣ ಗಳಿಸೋದನ್ನ ಹೇಳಿಕೊಡುವದಕ್ಕಿಂತ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿರಿ.ಅಂದಾಗ ಗೌರವ, ಹಣ ಎರಡೂ ನಿಮ್ಮದಾಗುತ್ತವೆ ಎಂದು ಕಪ್ಪತ್ತಗುಡ್ಡದ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮಿಜಿ ಹೇಳಿದರು.

ಗದಗ ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಲಿಟಲ್ ಮಿಲೇನೀಯಮ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸಿ ಪೂಜ್ಯರು ಆಶಿರ್ವಚನ ನೀಡಿದರು.

ತಂದೆ ತಾಯಿಗಳು ಮಕ್ಕಳಿಗೆ ವಿದ್ಯಾ-ಬುದ್ದಿಯ ಜೊತೆಗೆ ದೇಶಾಭಿಮಾನವನ್ನೂ ಕಲಿಸಿರಿ. ದೇಶಾಭಿಮಾನ ಇಲ್ಲದೇ ಇದ್ರೆ ಮಕ್ಕಳು ಪರದೇಶಿ, ಪಾಲಕರು ಸ್ವದೇಶಿಯಂತಾಗುತ್ತಾರೆ.ಮುಂದಿನ ದಿನಮಾನಗಳಲ್ಲಿ ಪಾಲಕರು ಕೊನೆ ಘಳಿಗೆಯಲ್ಲಿದ್ದಾಗ, ವಿದೇಶದಲ್ಲಿರುವ ಮಕ್ಕಳು ಪಾಲಕರ ಮುಖ ನೋಡಲೂ ಬಾರದೇ, ಪೋನ್ ಪೇ ಮೂಲಕ ಹಣ ಕಳಿಸಿ ಸಕಲ ಕಾರ್ಯ ಮುಗಿಸಿ ಬಿಡಿ ಎಂದು ಹೇಳುತ್ತಾರೆ. ವಿದೇಶಕ್ಕೆ ಹೋಗುವುದು ತಪ್ಪಲ್ಲ,ಆದರೆ ಹೆತ್ತವರನ್ನು ನೋಡಿಕೊಳ್ಳದೇ ವಿದೇಶದಲ್ಲಿರುವುದು ತಪ್ಪು ಎಂದು ತಿಳಿಸಿದರು.

ಇನ್ನು ಟಿ.ವಿ ಬಂದಾಗಿನಿಂದ ಪುಸ್ತಕ ಓದುವರ ಸಂಖ್ಯೆ ಕಡಿಮೆಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದಂತೆ ಮೈಮೇಲೆ ಹರಿದ ಅಂಗಿಯಿದ್ದರೂ ಪರವಾಗಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂದಿದ್ದಾರೆ. ಹಾಗಾಗಿ ನಾವು ಮೊದಲು ಪುಸ್ತಕ ಹಿಡಿದು ಕುಳಿತರೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಪುಸ್ತಕ ಹಿಡಿದು ಕುಳಿತುಕೊಳ್ಳುತ್ತಾರೆ. ಮಕ್ಕಳಿಗೆ ಸಂಸ್ಕಾರವನ್ನ ಕಲಿಸದಿದ್ದರೆ ದೊಡ್ಡವರಾದ ಮೇಲೆ ಬಾರ್ ದಾಸ್, ಬೀರ್ ದಾಸರಾಗಿ ತಮಗೂ ಗೌರವ ಇಲ್ಲದಂತಾಗಿ, ಪಾಲಕರ ಗೌರವವನ್ನು ಕಳೆಯುವಂತಾಗುತ್ತಾರೆ. ಹೀಗಾಗಿ ಸಂಸ್ಕೃತಿ, ಸಂಸ್ಕಾರ ಕಲಿಸಿ, ಮಕ್ಕಳನ್ನ ಪ್ರಜ್ಞಾವಂತ ಪ್ರಜೆಗಳನ್ನಾಗಿಸಿ ಎಂದರು

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande