ಬಳ್ಳಾರಿ, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಬೆಣಕಲ್ಲು ಹಾಗೂ ಹೊಸ ಯರಗುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆ.ಟಿ. ಫೌಂಡೇಶನ್ ಹಾಗೂ ಶ್ರೀಲಕ್ಷಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರಿಕ್ಷೆ ಬರೆಯಲು ಪೆನ್ನು ಪ್ಯಾಡ್‍ಗಳನ್ನು ವಿತರಿಸಿ, ಶುಭ ಹಾರೈಸಲಾಯಿತು.
ಜೆಟಿ ಪೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಅವರು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ದೇಶದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪರೀಕ್ಷೆಗಾಗಿ 15 ದಿನಗಳ ಕಾಲಾವಕಾಶವಿದ್ದು, ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.
ಬೆಣಕಲ್ಲು, ಹೊಸ ಯರಗುಡಿ, ಮೋಕ, ಗೋನಾಳು, ಸಿರವಾರ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪರೀಕ್ಷೆಯ ಪ್ಯಾಡು ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಶ್ರೀಶ್ರೀಶ್ರೀ ನಾಗಲಿಂಗ ತಾತನವರು, ಪತ್ರಕರ್ತರಾದ ಕೆ.ಎಂ. ಮಂಜುನಾಥ, ಶಶಿಧರ ಮೇಟಿ, ದರೂರು ಆಶೋಕ್ ಗೌಡ, ಜಾಲಿಹಾಳ್ ಗವಿಸಿದ್ದ, ರೂಪನಗುಡಿ ನಾಗರಾಜ, ಧನುಂಜಯ, ಭೀಮೇಶಸ್ವಾಮಿ, ಸಂಗನಕಲ್ಲು ವಿಜಯಕುಮಾರ್, ರವಿ, ಬಿ. ಎರಸ್ವಾಮಿ, ಬೆಣಕಲ್ಲು ಬಸವರಾಜ್, ಗಂಗಾಧರ, ಮಲ್ಲಿ, ಜೋಳದರಾಶಿ ಚಂದ್ರಶೇಖರ, ರಮೇಶ್, ಶೇಕ್ಷಾವಲಿ, ಹುಲುಗಪ್ಪ, ರವಿಸ್ವಾಮಿ, ತಿಪ್ಪೇಸ್ವಾಮಿ, ಚಂದ್ರ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್