ಸಿಂಧನೂರು, 06 ಮಾರ್ಚ್ (ಹಿ.ಸ.) :
ಆ್ಯಂಕರ್ : ಸಿಂಧನೂರು ನಗರಸಭೆಯಿಂದ 2023-24 ಮತ್ತು 2024-25ನೇ ಸಾಲಿನ ಶೇ.5 ಯೋಜನೆಗಳಿಗೆ ಕಾಯ್ದಿರಿಸಲಾದ ಎಸ್.ಎಫ್.ಸಿ (ಮುಕ್ತ ನಿಧಿ) ನಗರಸಭೆ ನಿಧಿ ಅನುದಾನಗಳ ಅನುಷ್ಠಾನಕ್ಕಾಗಿ ವೈಯಕ್ತಿಕ ಚಟುವಟಿಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪೂರ್ಣ ವಿವರದ ಪ್ರಕಟಣೆಯನ್ನು ನಗರಸಭೆ ಕಾರ್ಯಾಲಯ ನೋಟಿಸ್ ಫಲಕದಲ್ಲಿ ಹಾಗೂ ವೆಬ್‍ಸೈಟ್ http://www.sindhanurcity.mrc.gov.in/ನಲ್ಲಿ ಮಾಹಿತಿಯನ್ನು ಡೌನ್‍ಲೋಡ್ ಮಾಡಿಕೊಂಡು ವಿವರ ಪಡೆದುಕೊಳ್ಳಬಹುದಾಗಿದೆ.
ವೈಯಕ್ತಿಕ ಚಟುವಟಿಕೆವಾರು ಮುಂದೆ ತಿಳಿಸಿರುವ ಅಗತ್ಯ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳ ಧೃಢೀಕರಣದೊಂದಿಗೆ ಮಾ.15ರ ಸಂಜೆ 5.30ಗಂಟೆಯೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕ ಮೀರಿ ಬಂದಂತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಿಂಧನೂರು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್