ಎನ್ ಜಿಇಎಫ್ ಮೈಲಿಗಲ್ಲು : ಸಚಿವರಿಂದ ಪ್ರಶಂಸೆ
ಬೆಂಗಳೂರು, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಸರಕಾರಿ ಸ್ವಾಮ್ಯದ ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಸಾಗಾಣಿಕೆ ಘಟಕ(ಎನ್ ಜಿಇಎಫ್) ಅಭಿವೃದ್ಧಿಯ ಹಾದಿಯಲ್ಲಿ ಮುಂದುವರೆದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಮಂಗಳವಾರ ಪಂಜಾಬ್ ನ ಭಟ್ಟಿಂಡದಿಂದ ಗುಜರಾತ್ ನ ಜಾಮಾನಗರದ ದಿಗ
Ngef


ಬೆಂಗಳೂರು, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಸರಕಾರಿ ಸ್ವಾಮ್ಯದ ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಸಾಗಾಣಿಕೆ ಘಟಕ(ಎನ್ ಜಿಇಎಫ್) ಅಭಿವೃದ್ಧಿಯ ಹಾದಿಯಲ್ಲಿ ಮುಂದುವರೆದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಮಂಗಳವಾರ ಪಂಜಾಬ್ ನ ಭಟ್ಟಿಂಡದಿಂದ ಗುಜರಾತ್ ನ ಜಾಮಾನಗರದ ದಿಗ್ವಿಜಯ್ ಸಿಮೆಂಟ್ ಕಾರ್ಖಾನೆಗೆ 25MVA ಸಾಮರ್ಥ್ಯದ ಅತಿ ದೊಡ್ಡ ಟ್ರಾನ್ಸ್’ಫಾರ್ಮರ್ ಅನ್ನು ರವಾನಿಸಿ ಘಟಕ ಮೈಲಿಗಲ್ಲು ಸಾಧಿಸಿದೆ, ಈ ಯಶಸ್ಸಿಗೆ ಕಾರಣರಾದ ತಂತ್ರಜ್ಞರು, ಅಧಿಕಾರ ವರ್ಗ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.

ಹೂಡಿಕೆ ಸಮಾವೇಶದ ಮೂಲಕ ಹೊಸ ಉದ್ಯಮ ಸ್ಥಾಪನೆ, ವಿಸ್ತರಣೆಗೆ ಪ್ರೋತ್ಸಾಹ ನೀಡುತ್ತಿರುವಂತೆ, ಸರಕಾರಿ ಸ್ವಾಮ್ಯದ ಸಂಸ್ಥೆಯಾದ ಎನ್ ಜಿಇಎಫ್ ಸೇರಿದಂತೆ ಇನ್ನೂಳಿದ ಸಂಸ್ಥೆಗಳನ್ನೂ ಅಭಿವೃದ್ಧಿ ಪಥದತ್ತ ಮುನ್ನಡೆಸಲು ಇಲಾಖೆ ಬದ್ದವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande