ಮಸ್ಕಿ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಮಸ್ಕಿ ತಾಲೂಕಿನ ವಿದ್ಯುತ್ ಗ್ರಾಹಕರಿಗೆ ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ದಿನಾಂಕದೊಳಗೆ ಪಾವತಿ ಮಾಡಬೇಕು, ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಜೆಸ್ಕಾಂನ ಮಸ್ಕಿ ಕಾರ್ಯ ಮತ್ತು ಪಾಲನೆ, ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸದ್ದಾರೆ.
ಈಗಾಗಲೇ ತುಂಬಾ ದಿನಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಜೆಸ್ಕಾಂ ಸಿಬ್ಬಂದಿ ಬಿಲ್ ಪಾವತಿ ಮಾಡಲು ತಿಳಿಸಿದ್ದಾರೆ. ಗ್ರಾಹಕರು ಕೂಡಲೇ ವಿದ್ಯುತ್ ಬಿಲ್‌ನ್ನು ಪಾವತಿ ಮಾಡದೇ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು. ಆದ್ದರಿಂದ ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್‌ನ್ನು ಜೆಸ್ಕಾಂ ಕ್ಯಾಷ್ ಕೌಂಟರ್/ಆನ್‌ಲೈನ್/ ಮೊಬೈಲ್ ಅಪ್ಲಿಕೇಷನ್ ಮೂಲಕ ಬಿಲ್ ಪಾವತಿ ಮಾಡಿ.
ವಿದ್ಯುತ್ ಸಂಪರ್ಕದ ಅವಶ್ಯಕತೆ ಇದ್ದಲ್ಲಿಅಧಿಕೃತವಾಗಿ ಸಂಪರ್ಕ ಪಡೆದುಕೊಂಡು ಬಳಕೆ ಮಾಡಬೇಕು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣವನ್ನು ದಾಖಲೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್