ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ: ಆಕ್ಷೇಪಣೆಗೆ ಅರ್ಜಿ ಆಹ್ವಾನ
ರಾಯಚೂರು, 05 ಮಾರ್ಚ್ (ಹಿ.ಸ.) : ಆ್ಯಂಕರ್ : ಸಹಕಾರ ಇಲಾಖೆಯ ರಾಯಚೂರು ಉಪ ವಿಭಾಗದ ವ್ಯಾಪ್ತಿಯಲ್ಲಿ 06 ಸೌಹಾರ್ದ ಸಹಕಾರ ಸಂಘಗಳು ಸ್ಥಗಿತಗೊಂಡಿದ್ದು, ಸಮಾಪನೆಗಾಗಿ ಕ್ರಮ ವಹಿಸಲು ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಐಶ್ವರ್ಯ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ.ಗಿಲ್ಲೆಸುಗೂರ ಕ್ಯಾ
ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ: ಆಕ್ಷೇಪಣೆಗೆ ಅರ್ಜಿ ಆಹ್ವಾನ


ರಾಯಚೂರು, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ಸಹಕಾರ ಇಲಾಖೆಯ ರಾಯಚೂರು ಉಪ ವಿಭಾಗದ ವ್ಯಾಪ್ತಿಯಲ್ಲಿ 06 ಸೌಹಾರ್ದ ಸಹಕಾರ ಸಂಘಗಳು ಸ್ಥಗಿತಗೊಂಡಿದ್ದು, ಸಮಾಪನೆಗಾಗಿ ಕ್ರಮ ವಹಿಸಲು ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಐಶ್ವರ್ಯ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ.ಗಿಲ್ಲೆಸುಗೂರ ಕ್ಯಾಂಪ್, ತಾ.ರಾಯಚೂರು ನೋಂದಣಿ ಸಂಖ್ಯೆ:974, ಕಲ್ಪತರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ.ರಾಯಚೂರು, ನೋಂದಣಿ ಸಂಖ್ಯೆ:1772, ಶ್ರೀ ಭೋಗೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಕೆರಾಫ್ ಹೆಚ್.ಕೆ.ಗ್ರ್ರಾಫಿಕ್ಸ್ಸ್, ಕಾರೋಬಾರಿ ಕಾಂಪ್ಲೆಕ್ಸ್, ಪ್ರಧಾನ ಅಂಚೆ ಕಚೇರಿ ಹತ್ತಿರ ರಾಯಚೂರು ನೋಂದಣಿ ಸಂಖ್ಯೆ:978, ಗಂಗಾಮತ ನೌಕರರ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿ. ತಿಮ್ಮಾಪೂರು ಪೇಟೆ, ಗಂಗಾಪರಮೇಶ್ವರಿ ಕಾಂಪ್ಲೆಕ್ಸ್, ಮಂತ್ರಾಲಯ ರೋಡ್, ರಾಯಚೂರು ನೋಂದಣಿ ಸಂಖ್ಯೆ:2527, ದೇವಸಂಗಾ ಸೌಹಾರ್ದ ಪತ್ತಿನ ಸಹಕಾರಿ ನಿ.ದೇವಸೂಗೂರು, ನೋಂದಣಿ ಸಂಖ್ಯೆ:2524 ದಿ:29.11.2013 ತಾಲ್ಲೂಕು ಮಟ್ಟಕ್ಕಿಂತ ಕಡಿಮೆ. ಜನೋದಯ ಸ್ವಶಕ್ತಿ ಸೌಹಾರ್ದ ಸ್ವ-ಸಹಾಯ ಸಹಕಾರಿ ನಿ. ಮಾನ್ವಿ, ನೋಂದಣಿ ಸಂಖ್ಯೆ:965, ಶಿವ ಜನನಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಶಿವ ನಿಲಯ, ಶ್ರೀ ಸೂಗೂರೇಶ್ವರ ಕಾಲೋನಿ, ದೇವದುರ್ಗ, ನೋಂದಣಿ ಸಂಖ್ಯೆ:1780, ಶ್ರೀ ಶಿವಂ ಪತ್ತಿನ ಸೌಹಾರ್ದ ಸಹಕಾರಿ ನಿ., ಸಜ್ಜನ್ ಕಾಂಪ್ಲೆಕ್ಸ್, ಶಹಾಪುರ ರಸ್ತೆ, ದೇವದುರ್ಗ, ನೋಂದಣಿ ಸಂಖ್ಯೆ:4162. ಸ್ಥಗಿತಗೊಂಡ ಈ ಸೌಹಾರ್ದ ಸಹಕಾರ ಸಂಘಗಳನ್ನು ಸಮಾಪನೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಕ್ಷಮ ನಿಬಂಧಕರಿಗೆ ಅಗತ್ಯ ದಾಖಲಾತಿಗಳೊಂದಿಗೆ 7 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ. ನಿಗಧಿತ ಕಾಲಾವಧಿಯಲ್ಲಿ ಯಾವುದೇ ಆಕ್ಷೇಪಣೆ ಮತ್ತು ಅದನ್ನು ಸಮರ್ಥಿಸುವ ದಾಖಲೆಗಳ ಸಹಿತ ಸಲ್ಲಿಸದಿದ್ದಲ್ಲಿ ಯಾವುದೇ ಆಕ್ಷೇಪಣೆವಿಲ್ಲ ಎಂದು ಪರಿಗಣಿಸಿ ಸದರಿ ಸ್ಥಗಿತ ಸೌಹಾರ್ದ ಸಹಕಾರ ಸಂಘಗಳ ಸಮಾಪನೆಗಾಗಿ ಕ್ರಮವಹಿಸಲಾಗುವುದೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande