ಧಾರವಾಡ, 04 ಮಾರ್ಚ್ (ಹಿ.ಸ.) :
ಆ್ಯಂಕರ್ : 2024-25 ನೇ ಸಾಲಿನ ಮಾರ್ಚ ಮಾಹೆಯಲ್ಲಿ ಧಾರವಾಡ ಜಿಲ್ಲೆಯ ರೈತರಿಗೆ ಒಂದು ದಿನದ ಸಾಂಸ್ಥಿಕ ತರಬೇತಿಯನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಲಾಗಿದೆ.
ಮಾರ್ಚ 11 ರಂದು ಕೃಷಿಯಲ್ಲಿ ನವ ಉದ್ಯಮ ಘಟಕ, ಮಾರ್ಚ 13 ರಂದು ಸಾವಯವ ಕೃಷಿ ಹಾಗೂ ಜೈವಿಕ ಆಹಾರದ ಮಹತ್ವ ಹಾಗೂ ಮಾರ್ಚ 15 ರಂದು ಹೈನುಗಾರಿಕೆ ಮತ್ತು ಕುರಿ, ಕೋಳಿ ಸಾಕಾಣಿಕೆ ಲಾಭಗಳ ಕುರಿತು ತರಬೇತಿ ನೀಡಲಾಗುತ್ತದೆ.
ಧಾರವಾಡ ಜಿಲ್ಲೆಯ ಆಸಕ್ತ ರೈತರು ಮಾರ್ಚ 08, 2025 ರೊಳಗಾಗಿ ದೂರವಾಣಿ ಸಂಖ್ಯೆ: 0836-2978374, ಮೊ.ಸಂ: 9902133054 ಮತ್ತು 8277931382 ಗೆ ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa