ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಶಸ್ತ್ಯ : ಡಾ.ಗೊಳ್ಳೆ ಶಿವಶರಣ.ಬಿ
ಬಳ್ಳಾರಿ, 04 ಮಾರ್ಚ್ (ಹಿ.ಸ.) : ಆ್ಯಂಕರ್ : ಯುವಶಕ್ತಿ ಉದ್ಯಮದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉದ್ಯೋಗ, ಜಾಗತಿಕ ಕ್ಷೇತ್ರದಲ್ಲಿ ನರ‍್ಣಾಯಕರಾಗುತ್ತಾರೆ ಎಂದು ಕಲಬುರಗಿಯ ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನರ‍್ದೇಶಕ ಡಾ. ಗೊಳ್ಳೆ ಶಿವಶರಣ.ಬಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗ
ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಶಸ್ತ್ಯ: ಡಾ.ಗೊಳ್ಳೆ ಶಿವಶರಣ.ಬಿ


ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಶಸ್ತ್ಯ: ಡಾ.ಗೊಳ್ಳೆ ಶಿವಶರಣ.ಬಿ


ಬಳ್ಳಾರಿ, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ಯುವಶಕ್ತಿ ಉದ್ಯಮದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉದ್ಯೋಗ, ಜಾಗತಿಕ ಕ್ಷೇತ್ರದಲ್ಲಿ ನರ‍್ಣಾಯಕರಾಗುತ್ತಾರೆ ಎಂದು ಕಲಬುರಗಿಯ ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನರ‍್ದೇಶಕ ಡಾ. ಗೊಳ್ಳೆ ಶಿವಶರಣ.ಬಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ರ‍್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ನಡೆದ ‘ಕಲಿಕೆ ಜೊತೆಗೆ ಕೌಶಲ್ಯ 2.0’ ಯೋಜನೆಯ ಒಂದು ದಿನದ ಕರ‍್ಯಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ವೇಗವಾಗಿ ಬದಲಾಗುತ್ತಿರುವುದರಿಂದ ಉದ್ಯೋಗ ಸಂಬಂಧಿತ ಕೌಶಲ್ಯಗಳು ಕಲ್ಯಾಣ ರ‍್ನಾಟಕ ಹಿಂದುಳಿದ ಪ್ರದೇಶಗಳ ವಿದ್ಯರ‍್ಥಿಗಳಿಗೆ ವರದಾನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ವಂಚಿತರ ಪ್ರಮಾಣ ಶೇ.60 ರಷ್ಟು ಇದೆ. ಬಹುಮುಖ ಪ್ರತಿಭೆಗಳು ಮಾತ್ರ ಉದ್ಯೋಗಕ್ಕೆ ರ‍್ಹರಾಗಿದ್ದಾರೆ. ವಿದ್ಯರ‍್ಥಿಗಳು ಭವಿಷ್ಯದಲ್ಲಿ ಕೌಶಲ್ಯಗÀಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ರ‍್ನಾಟಕ ಕೌಶಲ್ಯ ಅಭವೃದ್ಧಿಯ ನಿಗಮದ ವ್ಯವಸ್ಥಾಪಕ ನರ‍್ದೇಶಕ ಡಾ. ರಾಗಪ್ರಿಯ. ಆರ್ ಅವರು, ವಿದ್ಯರ‍್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯ ಆಧಾರಿತ ಶಿಕ್ಷಣ ಮಹತ್ವಪರ‍್ಣವಾಗಿದೆ. ಕೌಶಲ್ಯಾಧಾರಿತ ಶಿಕ್ಷಣವನ್ನು ಹಲವಾರು ವಿದ್ಯರ‍್ಥಿಗಳು ಪಡೆದು ಒಳ್ಳೆಯ ಸ್ಥಾನದಲ್ಲಿದ್ದಾರೆ ಎಂದರು.

ವಿಶೇಷ ಆಹ್ವಾನಿತರಾಗಿ ವಿಡಿಯೋ ಸಂವಾದದ ಮೂಲಕ ಕಾಲೇಜು ಶಿಕ್ಷಣ ಬೆಂಗಳೂರು ನರ‍್ದೇಶಕಿ ಪ್ರೊ. ಶೋಭಾ.ಜಿ ಅವರು, ಶಿಕ್ಷಣ ರಂಗದಲ್ಲಿ ಪದವಿ ಜೊತೆಗೆ ಜ್ಙಾನಾಧಾರಿತ ಕೌಶಲ್ಯಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ನಾಲ್ಕು ವಿಶ್ವವಿದ್ಯಾಲಯಗಳ 28 ಸಾವಿರಕ್ಕೂ ಹೆಚ್ಚು ವಿದ್ಯರ‍್ಥಿಗಳು ಕೌಶಲ್ಯವೃದ್ಧಿ ಪಡೆಸಿಕೊಂಡಿದ್ದಾರೆ ಎಂದರು.

ವಿಶ್ವವಿದ್ಯಾಯದ ಮೌಲ್ಯಮಾಪನ ಕುಲಸಚಿವ ಡಾ. ಎನ್.ಎಂ.ಸಾಲಿ ಅವರು, ವಿಶ್ವವಿದ್ಯಾಲಯಗಳು ಸಾಂಪ್ರಾದಾಯಕದಿಂದ ವೈಜ್ಞಾನಿಕತೆಯಡೆಗೆ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಹಲವಾರು ಕೌಶಲ್ಯಗಳಿಂದ ಜಗತ್ತು ಮುಂದುವರೆಯುತ್ತಿದೆ. ನಾವು ಅದರೊಂದಿಗೆ ಸಾಗಬೇಕಾಗಿದೆ ಎಂದರು.

ಕುಲಪತಿ ಪ್ರೊ. ಎಂ. ಮುನಿರಾಜು ಅವರು ಕರ‍್ಯಕ್ರಮದ ಅಧ್ಯಕ್ಷತೆವಹಿಸಿ, ವಿದ್ಯರ‍್ಥಿಗಳು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒಲವು ಹೊಂದಬೇಕಾಗಿದೆ. ವಿದ್ಯರ‍್ಥಿಗಳು ಶಿಕ್ಷಕರಿಂದ ಸ್ಪರ‍್ತಿ ಪಡೆದು, ಕೌಶಲ್ಯಗಳ ಕೊರತೆಯನ್ನು ಹೋಗಲಾಡಿಸಬೇಕು. ಕೌಶಲ್ಯ ಆಧಾರಿತ ಶಿಕ್ಷಣದಿಂದ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮವಹಿಸೋಣ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್, ಕರ‍್ಯಕ್ರಮ ಸಂಯೋಜಕಿ ಡಾ.ನರ‍್ಮಲ.ಜೆ ಅವರು ವೇದಿಕೆಯಲ್ಲಿದ್ದರು. ಡಾ. ಬಿ. ಸರೋಜಾ ಅವರು ಕರ‍್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande