ಬಳ್ಳಾರಿ, 04 ಮಾರ್ಚ್ (ಹಿ.ಸ.):
ಆ್ಯಂಕರ್ : ರೈತರ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾರ್ಚ್ 10ರ ಸೋಮವಾರ ಎಐಕೆಕೆಎಂಎಸ್ ರೈತ ಸಂಘಟನೆಯ ನೇತೃತ್ವದಲ್ಲಿ ವಿಧಾನ ಸೌಧ ಚಲೋ ರ‍್ಯಾಲಿ ನಡೆಯಲಿದೆ.
ಎಐಕೆಕೆಎಂಎಸ್‍ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋವಿಂದ್ ಅವರು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು. ನರೇಗಾ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಒಂದು ಕುಟುಂಬಕ್ಕೆ ಕನಿಷ್ಠ 200 ಮಾನವ ದಿನಗಳ ಕೆಲಸ ಮತ್ತು 600 ರೂ ವೇತನವನ್ನು ನೀಡಬೇಕು.
ಹೊಸ ಕೃಷಿ ಮಾರುಕಟ್ಟೆ ನೀತಿಯನ್ನು ಕೈಬಿಡಬೇಕು. ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ. ಸರ್ಕಾರವೇ ರೈತರ ಬೆಳೆಯನ್ನು ಕರೀದಿಸಬೇಕು ಮತ್ತು ವಿದ್ಯುತ್ ಕಾಯ್ದೆ 2023 ರನ್ನು ರದ್ದುಗೊಳಿಸಬೇಕು ಎಂದು ವಿಧಾನ ಸೌಧ ಚಲೋ ರ‍್ಯಾಲಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಐಕೆಕೆಎಂಎಸ್‍ನ ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಮತ್ತು ಕೃಷಿ ವಿರೋಧಿ ನೀತಿಗಳನ್ನು ಜಾರಿ ಮಾಡಿ ಕೃಷಿಯನ್ನು ಕಾರ್ಪೊರೇಟೀಕರಣ ಮಾಡುವ ಹುನ್ನಾರ ನಡೆಸುತ್ತಿವೆ. ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಕುತ್ತಿವೆ ಎಂದು ಆರೋಪಿಸಿದರು.
ವಿಧಾನ ಸೌಧ ಚಲೋ ರ‍್ಯಾಲಿ ಯಲ್ಲಿ ಪಾಲ್ಗೊಳ್ಳಲು ಆಸಕ್ತ ರೈತರು ಮೊಬೈಲ್ ಸಂಖ್ಯೆ : 9972690319 / 9742994490 ಗೆ ಕರೆಮಾಡಿ, ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು. ಎಐಕೆಕೆಎಂಎಸ್‍ನ ರಾಜ್ಯ ಸಮಿತಿ ಸದಸ್ಯ ಈ. ಹನುಮಂತಪ್ಪ, ಕುರುಗೋಡು ತಾಲೂಕು ಅಧ್ಯಕ್ಷ ಲಿಂಗಪ್ಪ ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್