ಜನರ ನಡುವೆ ಜನತಾ ಪ್ರಣಾಳಿಕೆ ಕಾರ್ಯಕ್ರಮ
ಗದಗ, 04 ಮಾರ್ಚ್ (ಹಿ.ಸ.) : ಆ್ಯಂಕರ್ : ನವ ಕರ್ನಾಟಕ ನಿರ್ಮಾಣದ ಆಂದೋಲನ ಸಮಿತಿ ಆಶ್ರಯದಲ್ಲಿ ನಾಳೆ ಗದಗ ನಗರದ ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಯ. ನವಲಗುಂದ ಹಾಗೂ ಕರ್ನಾಟಕ ರೈತ ಸಂಘದ ಗದಗ ಜಿಲ್ಲ
ಫೋಟೋ


ಗದಗ, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ನವ ಕರ್ನಾಟಕ ನಿರ್ಮಾಣದ ಆಂದೋಲನ ಸಮಿತಿ ಆಶ್ರಯದಲ್ಲಿ ನಾಳೆ ಗದಗ ನಗರದ ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಜನರ ನಡುವೆ ಜನತಾ ಪ್ರಣಾಳಿಕೆ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಯ. ನವಲಗುಂದ ಹಾಗೂ ಕರ್ನಾಟಕ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಶಂಕರಗೌಡ ಜಾಯನಗೌಡ್ರ ಹೇಳಿದರು

ಗದಗ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಅವರು ಮಾತನಾಡಿದರು. ಬೆಳಿಗ್ಗೆ 10.30 ರಿಂದ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಈ ಚರ್ಚಾ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯಕ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಸಂಯೋಜಕ ಗೋಪಿನಾಥ ಜಿ, ಆಲ್ ಇಂಡಿಯಾ - ಮಾರಚಂದ್ರ ಮುನಿಯಪ್ಪ, ಎಐಬಿಎಸ್ಪಿಯ ರಾಜ್ಯ ಬಹುಜನ ಸಮಾಜ ಪಾರ್ಟಿ ಕರ್ನಾಟಕ ಘಟಕದ ಅಧ್ಯಕ್ಷ ಸಂಯೋಜಕ ಆರ್.ಮುನಿಯಪ್ಪ, ಡಿ.ಎಸ್.ಎಸ್ ಅಧ್ಯಕ್ಷ ಎನ್ ಮೂರ್ತಿ, ಆರ್.ಪಿ.ಐ. ಕರ್ನಾಟಕ ರಾಜ್ಯಾಧ್ಯಕ್ಷ ಮೋಹನರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟರಾಜು, ಮಾಜಿ ಶಾಸಕ ಎಚ್.ಡಿ.ಬಸವರಾಜ, ಕನ್ನಡ ಹೋರಾಟಗಾರ ಶಿವರಾಂ, ಬಹುಜನ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಆರ್.ಎಮ್.ಎನ್ ರಮೇಶ ಆರ್.ಎಮ್.ಎನ್ ರಮೇಶ, ಟಿಪ್ಪು ಕ್ರಾಂತಿ ಸೇನೆಯ ಸಂಸ್ಥಾಪಕ ರು. ಡಾ.ದಸ್ತಗಿರಿ ಮುಲ್ಲಾ ಸೇರಿ ಹಲವರು ಆಗಮಿಸುವರು.

ಕಟ್ಟಡ ಕಾರ್ಮಿಕ ಚಳವಳಿಗಾರರು, ಕೂಲಿ ಕಾರ್ಮಿಕ ಚಳವಳಿಗಾರರು, ಪರಿಸರ ಚಳವಳಿಗಾರರು, ಕನ್ನಡ ಭಾಷಾ ಚಳವಳಿಗಾರರು, ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ವರ್ತಕರು, ಸಾಹಿತಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚರ್ಚೆಯಲ್ಲಿ ರೈತರ ಸಾಲ ಮನ್ನಾ, ಬೆಳೆ ವಿಮೆ ಪರಿಹಾರ, ಕಳಸಾ-ಬಂಡೂರಿ ಯೋಜನೆಯಲ್ಲಿ ಹಂಚಿಕೆಯಾಗಿರುವ ನೀರನ್ನು ನೀರಾವರಿಗೆ ಬಳಕೆ ಸೇರಿ ವಿಷಯಗಳ ಬಗ್ಗೆ ಹಕ್ಕೊತ್ತಾಯ ಸಹ ಮಂಡಿಸಲಾಗುವುದು, ಕೃಷಿ ಕೂಲಿಕಾರ್ಮಿಕರಿಗೂ ಸಹ ಕಟ್ಟಡ ಕಾರ್ಮಿಕರಿಗೆ ನೀಡುವ ಮಾದರಿಯಲ್ಲೇ ಕಾರ್ಮಿಕ ಕಾರ್ಡ್ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಈ ನಿಟ್ಟಿನಲ್ಲೂ ನಾವೂ ಈ ಚರ್ಚಾ ಕಾರ್ಯಕ್ರಮದಲ್ಲಿ ಧ್ವನಿ ಎತ್ತುತ್ತೇವೆ ಎಂದು ಬಸವರಾಜ ನವಲಗುಂದ ಹಾಗೂ ಶಂಕರಗೌಡ ಜಾಯನಗೌಡ್ರ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande