ಸರಕಾರಿ ಶಾಲೆಗೆ ಟಿವಿ ದೇಣಿಗೆ
ಗದಗ, 04 ಮಾರ್ಚ್ (ಹಿ.ಸ.): ಆ್ಯಂಕರ್ : ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಗೆ ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಟಿವಿ ಕೊಡುಗೆ ನೀಡಲಾಯಿತು. ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಲಾಲಸಾಬ ಅರಗಂಜಿ ಅವರು ಮಾತನಾಡ
ಫೋಟೋ


ಗದಗ, 04 ಮಾರ್ಚ್ (ಹಿ.ಸ.):

ಆ್ಯಂಕರ್ : ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಗೆ ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಟಿವಿ ಕೊಡುಗೆ ನೀಡಲಾಯಿತು. ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಲಾಲಸಾಬ ಅರಗಂಜಿ ಅವರು ಮಾತನಾಡಿದರು. ‌

ಕನ್ನಡ ಶಾಲೆಯಲ್ಲಿ ಕಲಿತವರಿಗೆ ಗಟ್ಟಿತನ ಬಹಳ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಸರ್ಕಾರಿ ಶಾಲೆಯಲ್ಲಿ ಕಲಿತವರೆ ಆಡಳಿತ ನಡೆಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಸರ್ಕಾರಿ ಶಾಲೆಗೂ ನನಗೂ ಆತ್ಮೀಯ ಒಡನಾಟ ಇದೆ. ಹಲವಾರು ನೆನಪುಗಳಿವೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸಹಾಯವನ್ನು ಶಾಲೆಗೆ ಮಾಡುತ್ತೇನೆ ಎಂದು ಉದ್ಯಮಿಗಳಾದ ಲಾಲಸಾಬ ಅರಗಂಜಿ ಅವರು ಹೇಳಿದರು.

ಶಾಲೆಯ ಪ್ರಧಾನ ಗುರುಗಳಾದ ಎಸ್ ಎಂ ಶೀರಿ ಅವರು ಮಾತನಾಡಿ, ಲಾಲಸಾಬ ಅರಗಂಜಿ ಅಭಿಮಾನಿ ಬಳಗದಿಂದ ಉತ್ತಮ ಕಾರ್ಯಗಳು ಆಗುತ್ತಿವೆ. ತಂತ್ರಜ್ಞಾನ ಕಾಲದಲ್ಲಿ ಶಾಲಾ ಮಕ್ಕಳಿಗೆ ಡಿಜಿಟಲ್ ಮೂಲಕ ಪಾಠ ಮಾಡುವುದರಿಂದ ಮಕ್ಕಳಿಗೆ ಸಣ್ಣ ಸಮಯದಲ್ಲಿ ಹೆಚ್ಚಿನ ವಿಷಯಗಳನ್ನು ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಎಸ್ ಬಿ ದಾಸರ ಗುರುಗಳು ಮಾತನಾಡಿ ತಂದೆಯವರ ಮಾರ್ಗದಲ್ಲೇ ಸಾಗುತ್ತಿರುವ ಲಾಲಸಾಬ ಅರಗಂಜಿ ಬಡವರಿಗೆ, ರೈತಾಪಿ ವರ್ಗಕ್ಕೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರೋತ್ಸಾಹ, ಬೆಂಬಲ ನೀಡುತ್ತಾ ಸ್ಫೂರ್ತಿಯಾಗಿ ನಿಂತಿದ್ದಾರೆ ಎಂದರು

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande