ಗದಗ, 04 ಮಾರ್ಚ್ (ಹಿ.ಸ.) :
ಆ್ಯಂಕರ್ : ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಅಧಿಕೃತ, ಅನಧಿಕೃತ ಕಟ್ಟಡಗಳ ಹಾಗೂ ನಿವೇಶನಗಳಿಗೆ ಎ ಖಾತೆ ಮತ್ತು ಬಿ ಖಾತೆ ನೀಡುವ ಕುರಿತು ಮೇ 10 ರವರೆಗೆ ಇ – ಖಾತಾ ಆಂದೋಲನ ಹಮ್ಮಿಕೊಂಡಿದೆ. ಪಟ್ಟಣದಲ್ಲಿನ ಆಸ್ತಿ ಮಾಲೀಕರು ತಮ್ಮ ಕಟ್ಟಡ- ನಿವೇಶನಗಳಿಗೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ಕಚೇರಿಗೆ ಸಲ್ಲಿಸಿ ನಮೂನೆ-3 ಮತ್ತು ನಮೂನೆ – 3ಎ ಇ- ಖಾತಾ ನಮೂನೆಯನ್ನು ಪಡೆಯಬಹುದಾಗಿದೆ ಎಂದು ಗಜೇಂದ್ರಗಡ ಪುರಸಭೆ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
ಎ ರಿಜಿಸ್ಟರ್ ನಲ್ಲಿ ದಾಖಲಿಸಿ ಆಸ್ತಿ ಇ-ಖಾತಾ ನಮೂನೆ-3 ಪಡೆಯಲು ಸಲ್ಲಿಸಬೇಕಾದ ದಾಖಲೆಗಳು : ಆಸ್ತಿ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೊಂದಾಯಿತ ಮಾರಾಟ ಪತ್ರಗಳು, ದಾನ ಪತ್ರ ವಿಭಾಗ ಪತ್ರಗಳೂ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಕಂದಾಯ ಇಲಾಖೆಯಿಂದ ನೀಡಲಾದ ಹಕ್ಕು ಪತ್ರ., ಮಾಲೀಕರ ಪೋಟೋ ಮತ್ತು ಸ್ವತ್ತಿನ ಪೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಬಡಾವಣೆ ಅನುಮೋದನೆ ಪತ್ರ 6 ಹಾಗೂ ಕೆ.ಜಿ.ಪಿ. ನಕ್ಷೆ ಹೊಸ ಬಡಾವಣೆ, ಚಾಲ್ತಿ ಸಾಲಿನ, ಇತ್ತಿಚಿನ ಆಸ್ತಿ, ಶುಲ್ಕ ರಸೀದಿ ಹಿಂದಿನ ಸಾಲುಗಳ ತೆರಿಗೆ ಬಾಕಿ ಇದ್ದಲ್ಲಿ ಪಾವತಿಸುವುದು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ,
ಬಿ ರಿಜಿಸ್ಟರ್‌ನಲ್ಲಿ ದಾಖಲಿಸಿ ಆಸ್ತಿ ಇ- ಖಾತಾ ನಮೂನೆ-3ಎ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಆಸ್ತಿಗೆ ಸಂಬAಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ: 10-09-2024 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು,ದಾನ ಪತ್ರ,ವಿಭಾಗ ಪತ್ರಗಳು, ಹಕ್ಕು ಖುಲಾಸೆ ಪತ್ರಗಳು, ಸ್ವತ್ತಿನ ಮಾಲೀಕರ ಪಾಸ್‌ಪೋರ್ಟ ಅಳತೆಯ ಭಾವಚಿತ್ರ , ಸ್ವತ್ತಿನ ಭಾವಚಿತ್ರ, ಮಾಲೀಕರ ಗುರುತಿನ ದಾಖಲೆ ಮತದಾರರ ಗುರುತಿನ ಚೀಟಿ ಪ್ಯಾನ ಕಾರ್ಡ ಚಾಲನಾ ಪತ್ರ ಲೈಸನ್ಸ ಪಾಸ್‌ಪೋರ್ಟ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೊಂದು, ಚಾಲ್ತಿ ಸಾಲಿನ ಇತ್ತೀಚಿನ ಆಸ್ತಿ ಶುಲ್ಕ ರಶೀದಿ ಹಿಂದಿನ ಸಾಲುಗಳ ತೆರಿಗೆ ಭಾಕಿ ಇದ್ದಲಿ ಪಾವತಿಸುವುದು.
ಮೇಲಿನಂತೆ ನಮೂನೆ-3 ಹಾಗೂ ನಮೂನೆ -3ಎ ಇ-ಖಾತಾ ದಾಖಲೆಗಳನ್ನು ಸಲ್ಲಿಸುವಂತೆ ಮುಖ್ಯಾಧಿಕರಿಗಳು ಪುರಸಭೆ ಗಜೇಂದ್ರಗಡ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ. 08381-262222 ಮತ್ತು ಮೊಬೈಲ್ ಸಂಖ್ಯೆ: 9886424360, 9916191016 ವಾಟ್ಸಾಪ್ ಸಂಖ್ಯೆ. 9916191016, ಇ-ಮೇಲ್: ka.gajendragad.tmc@gmail.com.
ಹಿಂದೂಸ್ತಾನ್ ಸಮಾಚಾರ್ / Lalita MP