ಬೆಂಗಳೂರು, 11 ಮಾರ್ಚ್ (ಹಿ.ಸ.) :
ಆ್ಯಂಕರ್ : ಮುಜರಾಯಿ ಇಲಾಖೆಯ ಕೇವಲ 10 ದೇವಾಲಯಗಳಿಂದ ಈ ವರ್ಷದ ಆರಂಭದಲ್ಲಿ, ಜನವರಿ - ಫೆಬ್ರವರಿ ಎರಡೇ ತಿಂಗಳಲ್ಲಿ ₹70 ಕೋಟಿ ಆದಾಯ ಹರಿದು ಬಂದಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
‘ಶಕ್ತಿ’ ಯೋಜನೆಯ ಫಲದಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆದಾಯದಲ್ಲಿ ಈ ವರ್ಷವೂ ಭರ್ಜರಿ ಏರಿಕೆಯಾಗಿದೆ.
ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಆದಾಯ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಎರಡು - ಮೂರು ಪಟ್ಟು ಏರಿಕೆಯಾಗುತ್ತಾ ಬಂದಿದ್ದು, ಈಗ ದಾಖಲೆಯ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa