ಗದಗ, 11 ಮಾರ್ಚ್ (ಹಿ.ಸ.) :
ಆ್ಯಂಕರ್ : ಎರಡನೇ ಸುತ್ತಿನ ಆಯವ್ಯಯ ಬಜೆಟ್ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಮಾರ್ಚ 13 ರಂದು ಮುಂಜಾನೆ 10:30 ಘಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಗದಗ ಬೆಟಗೇರಿ ನಗರಸಭೆ ಇವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಭವನದಲ್ಲಿ ಕರೆಯಲಾಗಿದೆ.
ಅವಳಿ ನಗರದ ಸಂಘ ಸಂಸ್ಥೆಗಳ ಪದಾಧಿಕಾರಿಗಳೂ, ಗಣ್ಯ ವ್ಯಕ್ತಿಗಳು , ಹಿರಿಯ ನಾಗರಿಕರು ಅವಳಿ ನಗರದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವವರು, ವಾಣಿಜ್ಯೋದ್ಯಮ ಸಂಸ್ಥೆಗಳೂ ಹಾಗೂ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳೂ ಹಾಗೂ ಜನ ಪ್ರತಿನಿಧಿಗಳಾದ ಸದಸ್ಯರುಗಳೊಂದಿಗೆ ಸಮಾಲೋಚಿಸಿ ಸಲಹೆ ಸೂಚನೆಗಳನ್ನು ಪಡೆದು 2025-2026 ನೇ ಸಾಲಿನ ಬಜೆಟ್ ಆಯವ್ಯಯ ಮಂಡಿಸಲಾಗುವುದು ಎಂದು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP