ಆರ್‌ಸೇಟಿ; ವೃತ್ತಿ, ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
ರಾಯಚೂರು, 11 ಮಾರ್ಚ್ (ಹಿ.ಸ.) : ಆ್ಯಂಕರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ನಿರುದ್ಯೋಗಿ ಯುವಕರಿಗಾಗಿ ವೃತ್ತಿ, ಕೌಶಲ್ಯಾಭಿವೃದ್ಧಿ ಕುರಿತು ತರಬೇತಿ ನೀಡಲು ಬಿಪಿಎಲ್ ಕಾರ್ಡ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 8ನೇ
ಆರ್‌ಸೇಟಿ; ವೃತ್ತಿ, ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ


ರಾಯಚೂರು, 11 ಮಾರ್ಚ್ (ಹಿ.ಸ.) :

ಆ್ಯಂಕರ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ನಿರುದ್ಯೋಗಿ ಯುವಕರಿಗಾಗಿ ವೃತ್ತಿ, ಕೌಶಲ್ಯಾಭಿವೃದ್ಧಿ ಕುರಿತು ತರಬೇತಿ ನೀಡಲು ಬಿಪಿಎಲ್ ಕಾರ್ಡ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 8ನೇ ತರಗತಿ ವ್ಯಾಸಂಗ ಮಾಡಿಬೇಕು. 18ರಿಂದ 45ವರ್ಷದೊಳಗಿನ ವಯಸ್ಸು ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ 30ದಿನಗಳ ಸೆಲ್ ಫೋನ್ ರಿಪೇರಿ ಹಾಗೂ 10ದಿನಗಳ ಕುರಿ ಸಾಕಣಿಕೆ ಕುರಿತು ತರಬೇತಿ ನೀಡಲಾಗುವುದು.

ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ಉಚಿತ ವಸತಿ ಸೌಕರ್ಯದ ವ್ಯವಸ್ಥೆ ನೀಡಲಾಗುವುದು. ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್, 4 ಪೋಟೋ, ಬ್ಯಾಂಕ್ ಪಾಸ್ ಪ್ರತಿಯೊಂದಿಗೆ ಮಾ.17ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ(ಆರ್‌ಸೇಟಿ) ಆಶಾಪೂರು ರಸ್ತೆ, ರಾಯಚೂರು ಅಥವಾ ದೂರವಾಣಿ ಸಂಖ್ಯೆ: 9742470999 ಅಥವಾ 8217382735ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande