ರಾಜ್ಯ ಸರ್ಕಾರದ ವಿರುದ್ಧ ಜೈನ ಸಮಾಜ ಆಕ್ರೋಶ
ಕಲಬುರಗಿ, 11 ಮಾರ್ಚ್ (ಹಿ.ಸ.) : ಆ್ಯಂಕರ್ : ರಾಜ್ಯ ಬಜೆಟ್‌ನಲ್ಲಿ ಜೈನ್ ಸಮುದಾಯಕ್ಕೆ ಅನ್ಯಾಯವಾಗಿದೆಯೆಂದು ಕಲಬುರಗಿ ಜಿಲ್ಲಾ ಜೈನ ಸಮಾಜ ಯುವ ವೇದಿಕೆ ಅಧ್ಯಕ್ಷ ಸುರೇಶ್ ತಂಗಾ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೈನ ಸಮಾಜದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜೈನ ಅಭಿವೃ
ರಾಜ್ಯ ಸರ್ಕಾರದ ವಿರುದ್ಧ ಜೈನ ಸಮಾಜ ಆಕ್ರೋಶ


ಕಲಬುರಗಿ, 11 ಮಾರ್ಚ್ (ಹಿ.ಸ.) :

ಆ್ಯಂಕರ್ : ರಾಜ್ಯ ಬಜೆಟ್‌ನಲ್ಲಿ ಜೈನ್ ಸಮುದಾಯಕ್ಕೆ ಅನ್ಯಾಯವಾಗಿದೆಯೆಂದು ಕಲಬುರಗಿ ಜಿಲ್ಲಾ ಜೈನ ಸಮಾಜ ಯುವ ವೇದಿಕೆ ಅಧ್ಯಕ್ಷ ಸುರೇಶ್ ತಂಗಾ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೈನ ಸಮಾಜದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.. ಆದರೆ ಸರ್ಕಾರ ಬಜೆಟ್‌ನಲ್ಲಿ ಜೈನ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಸಮಾಜಕ್ಕೆ ಬಹಳ ನೋವುಂಟು ಮಾಡಿದೆಯೆಂದು ಸುರೇಶ್ ತಂಗಾ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಜೇಂದ್ರ ಕುಣಚಗಿ, ಶ್ರೇಣಿಕ್ ಪಾಟೀಲ್, ರಾಹುಲ್ ಕುಂಬಾರೆ, ಧರಣೇಂದ್ರ ಸಂಗಮಿ, ರಮೇಶ ಬೆಳಕೇರಿ, ಚೇತನ ಪಂಡಿತ ಸೇರಿದಂತೆ ಇತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande