ಕಲಬುರಗಿ, 11 ಮಾರ್ಚ್ (ಹಿ.ಸ.) :
ಆ್ಯಂಕರ್ : ಪಿಯುಸಿ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಬದಲಿ ವಿದ್ಯಾರ್ಥಿನಿ ಎಕ್ಸಾಮ್ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈ ಕಾರ್ಯಕರ್ತೆ ಸಂಪೂರ್ಣ ಪಾಟೀಲ್'ಗೆ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಕಲಬುರಗಿಯ ನಾಲ್ಕನೆ ಜೆ ಎಮ್ ಎಫ್ ಸಿ ನ್ಯಾಯಲಯ ಆದೇಶಿಸಿದೆ.
ಕಲಬುರಗಿ ನಗರದ ಮೀಲಿಂದ್ ಶಾಲೆಯಲ್ಲಿ ಅರ್ಚನಾ ಅನ್ನೋ ವಿದ್ಯಾರ್ಥಿನಿ ಹೆಸರಿನಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಸಂಪೂರ್ಣ ಪಾಟೀಲ್, ಇದೀಗ ಹೆಚ್ಚಿನ ವಿಚಾರಣೆಗಾಗಿ ಬ್ರಹ್ಮಪೂರ ಪೊಲೀಸರ ವಶಕ್ಕೆ ನೀಡಿ ನ್ಯಾಯಲಯ ಆದೇಶಿಸಿದೆ. ದಲಿತ ಸೇನೆ ಸಂಪೂರ್ಣ ಪಾಟೀಲ್ ಅಕ್ರಮವಾಗಿ ಪರೀಕ್ಷೆ ಬರೆದಿದ್ದನ್ನ ಪತ್ತೆ ಹಚ್ಚಿತ್ತು. ಬಳಿಕ ಶಾಲಾ ಆಡಳಿತ ಮಂಡಳಿಯಿಂದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ನಕಲಿ ಅಭ್ಯರ್ಥಿ ಪರೀಕ್ಷೆ ಬರೆದಿರುವ ಬಯಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa