ಗದಗ, 11 ಮಾರ್ಚ್ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿ ನಗರಸಭೆ ವಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರು ಆಸ್ತಿ ತೆರಿಗೆಯನ್ನು ನಿರ್ಧರಣೆಗೊಳಿಸಿಕೊಂಡು ಇ ಆಸ್ತಿ ಪಡೆದುಕೊಳ್ಳುವುದು ಅವಶ್ಯವಿರುತ್ತದೆ. ಈ ಸಂಬಂದ ಕರ್ನಾಟಕ ಅಧಿನಿಯಮ 19 ರ ಸೆಕ್ಷನ್ 106 ರಂತೆ ನಮೂನೆ 03 ಅಧಿಕೃತ ನಕಲುಗಳನ್ನು ಹಾಗೂ ರಿಜಿಸ್ಟರ್ ಬಿ, ನಮೂನೆ 3ಎ, ಅನಧೀಕೃತ ಸ್ವತ್ತುಗಳ ವಹಿಯನ್ನು ನಿರ್ವಹಿಸಬೇಕಾಗಿರುವುದರಿಂದ ನಗರಸಭೆ ವಾಪ್ತಿಯ ಎಲ್ಲಾ ಆಸ್ತಿಗಳ ಮಾಲೀಕರು ಈ ಕೆಳಕಂಡ ದಾಖಲಾತಿಗಳನ್ನು ಮಾರ್ಚ-2025ರ ಅಂತ್ಯದೊಳಗೆ ಕಚೇರಿಗೆ ಸಲ್ಲಿಸಬೇಕಾಗಿದೆ.
ದಾಖಲಾತಿಗಳು; ಮಾಲೀಕತ್ವ ದೃಡಿಕರಿಸುವ ನೋಂದಾಯಿತ ದಾಖಲೆ. ಸ್ವತ್ತಿನ ಋಣಭಾರ ಪ್ರಮಾಣ ಪತ್ರ ನಮೂನೆ 15 ರಲ್ಲಿ, ಆಸ್ತಿ ತೆರಿಗೆ ಪಾವತಿಸಿದ ರಶೀದಿ, ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ, ಪ್ಯಾನ ಕಾರ್ಡ, ವೋಟರ ಐಡಿ. ಸ್ವತ್ತೀನ ಜಿ. ಪಿ. ಎಸ್, ಛಾಯಾ ಚಿತ್ರ, ಆಸ್ತಿ ಮಾಲೀಕರ ಪೋಟೋ . ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಕಂದಾಯ ನೀರಿಕ್ಷಕರು ಆಥವಾ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಸಹಾಯ ವಾಣಿ : 08372-278504 ಆಗಿರುತ್ತದೆ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP