ಗದಗ, 11 ಮಾರ್ಚ್ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ಎಷ್ಟೇ ಪೊಲೀಸ್ ಕಾವಲಿದ್ದರೂ ನಡುರಾತ್ರಿಯಲ್ಲಿ ನುಗ್ಗಿ ಸರಣಿ ಕಳ್ಳತನ ಮಾಡಿ, ಲಕ್ಷಾಂತರ ರೂ ಬೆಲೆಬಾಳುವ ನಗನಾಣ್ಯದೊಂದಿಗೆ ಪರಾರಿಯಾಗುತ್ತಿದ್ದ ಮುಸುಕುಧಾರಿ ದರೋಡೆ ಕೋರರ ತಂಡದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆಬ್ರವರಿ 16 ರಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಲವೆಡೆ ಅಂಗಡಿಗಳ ಶೆಲ್ಟರ್ ಮುರಿದು ಲಕ್ಷಾಂತರ ನಗದು ದೋಚಿ ತಂಡ ಪರಾರಿಯಾಗಿತ್ತು. ತಕ್ಷಣ ಎಚ್ಚೆತ್ತ ಗದಗ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಮುಸುಕುಧಾರಿ ಕಳ್ಳರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಎರಡು ಬೈಕ್. 25 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ನಾಯಂಡಹಳ್ಳಿ ಮೂರನೇ ಕ್ರಾಸ್‌ನ ತರಕಾರಿ ಮಾರ್ಕೆಟ್ ಬಳಿಯ ನಿವಾಸಿ ಅಶೋಕ ತಂದೆ ಶ್ರೀನಿವಾಸ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪೂರ ನಿವಾಸಿ ಮಂಜುನಾಥ್ ಅಲಿಯಾಸ್ ಕರಿಯಾ ತಂದೆ ನಾಗರಾಜ್, ತುಮಕೂರಿನ ಹೆಬ್ಬರು ಹೋಬಳಿಯ ಶ್ರೀಕಂಟಯ್ಯನಪಾಳ್ಯ ನಿವಾಸಿ ಪ್ರಕಾಶ್ ಅಲಿಯಾಸ್ ಬೋಡಾ ತಂದೆ ಗಂಗಶಾನಯ್ಯ, ತುಮಕೂರಿನ ಉಪ್ಪಾರ ಹಳ್ಳಿ ನಿವಾಸಿ ಇಮ್ರಾನ್ ತಂದೆ ಅಮೀರ್ ಜಾನ್, ಹಾಗೂ ಇನ್ನೊಬ್ಬ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಗೂಡು ತಾಲೂಕಿನ ಹೋಟಗಿ ನಿವಾಸಿ ಸಮರ್ಥ ತಂದೆ ರಮೇಶ್ ಜಾಧವ್, ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.
ಪೊಲೀಸ್ ವರೀಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಮ್.ಬಿ. ಸಂಕದ, ಡಿವೈಎಸ್ಪಿ ಜೆ.ಎಚ್. ಇನಾಮದಾರ, ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ ಬೆಟಗೇರಿ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ, ಬಡಾವಣೆ ಪಿಎಸ್ ಐಗಳಾದ ಮಾರುತಿ ಜೋಗಂಡಕರ್, ಬಿ.ಟಿ. ರಿತ್ತಿ, ಸಿಬ್ಬಂದಿಗಳಾದ ಎನ್.ಡಿ. ಹುಬ್ಬಳ್ಳಿ, ಎಸ್.ಎಚ್. ಕಮತರ, ಪರಶುರಾಮ ದೊಡಮನಿ, ಆಶೋಕ ಗದಗ, ನಾಗರಾಜ್ ಬರಡಿ, ಅಕ್ಷಯ್ ಬದಾಮಿ, ಶಿವಾನಂದ ಲಮಾಣಿ, ಶಿವಕುಮಾರ್ ತಹಸೀಲ್ದಾರ್, ಗುರುರಾಜ್ ಬೂದಿಹಾಳ, ಸಂಜು ಕೊರಡೂರ ಒಳಗೊಂಡ ತಂಡ ವಿಶೇಷ
ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP