ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ : ಡಾ. ಜ್ಯೋತಿ ಅರವಿಂದ ಪಾಟೀಲ್
ಬಳ್ಳಾರಿ, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಡಾ. ಜ್ಯೋತಿ ಅರವಿಂದ ಪಾಟೀಲ್ ಅವರು ತಿಳಿಸಿದ್ದಾರೆ. ರಂಗ ಜಂಗಮ ಸಂಸ್ಥೆ(ರಿ) ಡಿ.ಕಗ್ಗಲ್, ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಹಾಗೂ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಜಂಟಿಯಾಗಿ
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ; ಡಾ. ಜ್ಯೋತಿ ಅರವಿಂದ ಪಾಟೀಲ್


ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ; ಡಾ. ಜ್ಯೋತಿ ಅರವಿಂದ ಪಾಟೀಲ್


ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ; ಡಾ. ಜ್ಯೋತಿ ಅರವಿಂದ ಪಾಟೀಲ್


ಬಳ್ಳಾರಿ, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಡಾ. ಜ್ಯೋತಿ ಅರವಿಂದ ಪಾಟೀಲ್ ಅವರು ತಿಳಿಸಿದ್ದಾರೆ.

ರಂಗ ಜಂಗಮ ಸಂಸ್ಥೆ(ರಿ) ಡಿ.ಕಗ್ಗಲ್, ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಹಾಗೂ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಜಂಟಿಯಾಗಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2025ರ ಅಂಗವಾಗಿ ಪ್ರಶಸ್ತಿ ಪ್ರಧಾನ, ವಿಶೇಷ ಉಪನ್ಯಾಸ, ಸುಗಮ ಸಂಗೀತ, ಪುಸ್ತಕ ಬಿಡುಗಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ದೇಶಗಳಿಗಿಂತ ಭಾರತ ದೇಶ ವಿಶೇಷವಾದದ್ದು. ಮಹಿಳೆಯರಿಗೆ ದೇವತೆಯ ಸ್ಥಾನ ನೀಡಿ ಗೌರವಿಸುವ ದೇಶ ಭಾರತ ದೇಶ. ಮಹಿಳೆಯರ ಪಾಲಿಗೆ ಭಾರತ ದೇಶ ನಮ್ಮೆಲ್ಲರ ಸೌಭಾಗ್ಯ ಎಂದರು.

ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶ್ವರಾಮು ಅವರು, ಅನೇಕ ಶೋಷಣೆ ಹಾಗೂ ದೌರ್ಜನ್ಯ ಕ್ಕೊಳಗಾದ ಮಹಿಳೆಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ರಕ್ಷಣೆಗಾಗಿ ಮತ್ತು ಸಮಾನತೆಗಾಗಿ ಅನೇಕ ಕಾನೂನು, ಕಾಯ್ದೆಗಳು ಹಾಗೂ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು.

ಉಪನ್ಯಾಸಕ ಆಲಂಬಾಷ, ಶ್ರೀಮತಿ ಬಿ. ಪದ್ಮಾವತಿ ಸುಭಾಷ್ ಆಚಾರ್ಯ, ಡಾ. ಚಿನ್ನ ವಿ. ಗೌಡರ್ ಅವರು ಮಾತನಾಡಿದರು.

ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಗೀತಾ ಪಾಟೀಲ್ ಅವರು, ಹೆಣ್ಣು ತಮ್ಮ ಮನೆಯನ್ನ ಅಷ್ಟೇ ಅಲ್ಲ; ಇಡೀ ರಾಜ್ಯವನ್ನ ನೋಡಿಕೊಳ್ಳುವಷ್ಟು ಶಕ್ತಿ ಇದೆ. ನಮ್ಮ ಸಂಸ್ಕøತಿಯನ್ನು ಬೆಳೆಸಿ ಉಳಿಸಿ ಮುನ್ನಡೆಸುತ್ತಿರುವುದು ಸ್ತ್ರೀ ಎಂದು ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಹೇಳಿದರು.

ಡಿ. ಹಿರೇಹಾಳ್‍ನ ಶ್ರೀಮತಿ ಎನ್. ಪುಷ್ಪಾವತಿ ಅವರು, ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಉತ್ತಮ ಕುಟುಂಬದ ಜವಾಬ್ದಾರಿಯ ಜೊತೆಗೆ ಸಮಾಜದ ತಪ್ಪುಗಳನ್ನು ತಿದ್ದಬೇಕು ಎಂದರು.

ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಗಿರಿಜಾ ಅವರು, ಮಹಿಳೆಯರ ಸಾಧನೆ ಎಷ್ಟರಮಟ್ಟಿಗೆ ಇದೆ ಎಂದರೆ ಬ್ರಿಟಿಷರನ್ನ ಎದುರಿಸಿದ ಕೀರ್ತಿ ಒಬ್ಬ ಮಹಿಳೆ ಚೆನ್ನಬೈರಾ ದೇವಿಗೆ ಸಲ್ಲುತ್ತದೆ ಎಂದರು.

ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರ ಸಂಪಾದಕತ್ವದ `ರಂಗಪಲ್ಲಟ' ಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕೆ.ಆರ್. ಎರೇಗೌಡ ಅವರು ಪ್ರಾರ್ಥನೆ ಮಾಡಿದರು. ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ವಿಷ್ಣು ಹಡಪದ ಅವರು ಕಾರ್ಯಕ್ರಮ ನಿರೂಪಿಸಿದರು. ಆಲಂಭಾಷಾ ಅವರು ವಂದನಾರ್ಪನೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande