ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ
ಗದಗ, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ಮಹೋತ್ಸವನ್ನು ಶಿವಪ್ಪ ಹಾಗೂ ಬಸಮ್ಮಾ ಕುರಿ ದಂಪತಿ, ನೀಲಮ್ಮ ಬಿಳೆಕಲ್ಲ ಹಾಗೂ ಸಂಗಡಿಗರು ವಿನೂತನವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ
ಫೋಟೋ


ಗದಗ, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ಮಹೋತ್ಸವನ್ನು ಶಿವಪ್ಪ ಹಾಗೂ ಬಸಮ್ಮಾ ಕುರಿ ದಂಪತಿ, ನೀಲಮ್ಮ ಬಿಳೆಕಲ್ಲ ಹಾಗೂ ಸಂಗಡಿಗರು ವಿನೂತನವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಬಸಮ್ಮಾ ಕುರಿ, ಶಾಲಿನಿ ಕುರಿ ಹಾಗೂ ನೀಲಮ್ಮಾ ಬಿಳೆಕಲ್ಲವರು ಮಾತನಾಡಿ, ಇಂದು ಗುರು ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ಮಹೋತ್ಸವನ್ನು ದೇವರ ಸ್ವರೂಪಿಳಾದ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟವನ್ನು ನೀಡುತ್ತಿರುವುದು ನಮ್ಮ ಸೌಭಾಗ್ಯ ಎಂದರು.

ರಾಯರು ಇಲ್ಲಿರುವ ಎಲ್ಲ ವಿಶೇಷ ಚೇತನರಿಗೆ ಆಶೀರ್ವದಿಸಿ, ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಜೀವನವನ್ನು ಸಾಗಿಸುವಂತೆ ಮಾಡಲೆಂದು ಪ್ರಾರ್ಥಿಸುತ್ತೇವೆಂದು ಹೇಳುತ್ತ, ನಿಸ್ವಾರ್ಥವಾಗಿ ದೇವರ ಸ್ವರೂಪಿಗಳಾದ ವಿಶೇಷ ಮಕ್ಕಳ ಸೇವೆಯನ್ನು ಮಾಡುವುದರ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆಯನ್ನು ಕೊಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಅತ್ಯಂತ ಕಷ್ಟಕರವಾದ ಸೇವಾ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿದ್ದು, ರಾಯರ ಕೃಪೆಯಿಂದ ಈ ವಿಶೇಷ ಮಕ್ಕಳು ಬೇಗ ಚೇತರಿಸಿಕೊಂಡು ನಮ್ಮೆಲ್ಲರಂತೆ ಬದುಕುವಂತಾಗಲೆಂದು ಹೇಳಿ, ಇನ್ನೂ ಮುಂದೆ ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಎಂದು ಹೇಳಿ, ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ದೇಣಿಗೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ಪ್ರಾಸ್ತವಿಕವಾಗಿ ಮಾತನಾಡಿ, ಗುರು ರಾಘವೇಂದ್ರ ಸ್ವಾಮಿಗಳೇ ನಮ್ಮ ವಿಶೇಷ ಶಾಲೆಯಲ್ಲಿ ಬಂದಂತಾಗಿದೆ. ದೇವರ ಸ್ವರೂಪಿಗಳಾದ ಈ ಮಕ್ಕಳಿಗೆ ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಿ ಹಾಗೂ ದೇಣಿಗೆ ನೀಡಿ, ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಎಂದು ಹೇಳಿದರು.

ಎಲ್ಲರೂ ನಮ್ಮ ಸೇವಾ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ಗುರು ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಸನ್ನಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಎಲ್ಲರೂ ಪ್ರಷ್ಪಗಳನ್ನು ಸಲ್ಲಿಸಿದರು. ಮಂಜುನಾಥ ಆಸಂಗಿ, ವಿಜಯಕುಮಾರ ಬಿಳೆಕಲ್ಲ, ಜಯಂತ ಬಿಳೆಕಲ್ಲ, ವಿಜಯ ಕದಂ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಎಮ್‍ಎಸ್‍ಡಬ್ಲ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಬಸವರಾಜ ಗಾಡಿವಡ್ಡರ, ಮಧು ಬನ್ನಿಕೊಪ್ಪ, ಶಾಂತಮ್ಮಾ ಹೂಗಾರ ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಊಟವನ್ನು ಬಡಿಸಿದರು. ಆಗಮಿಸಿದೆಲ್ಲರೂ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟವನ್ನು ತಿನ್ನಿಸಿದ್ದು ತುಂಬಾ ವಿಶೇಷವಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande