ಉಪಲೋಕಾಯುಕ್ತರಿಂದ ದೂರು ಸ್ವೀಕಾರ
ಹೊಸಪೇಟೆ, 10 ಮಾರ್ಚ್ (ಹಿ.ಸ.) : ಆ್ಯಂಕರ್ : ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪನವರು ಮಾ.13 ರಿಂದ 15 ರವರೆಗೆ ವಿಜಯನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಹೊಸಪೇಟೆ ಘಟಕದ ಲೋಕಾಯುಕ್ತ ಪೆÇಲೀಸ್ ಉಪಾಧೀಕ್ಷಕರು ಅವರು ತಿಳಿಸಿದ್ದಾರೆ. ಹೊಸಪೇಟೆಯ ಡ್ಯಾಂ ರಸ್ತೆಯ ನೆಹರು ಕಾಲೋನಿಯ
ಉಪಲೋಕಾಯುಕ್ತರಿಂದ ದೂರು ಸ್ವೀಕಾರ


ಹೊಸಪೇಟೆ, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪನವರು ಮಾ.13 ರಿಂದ 15 ರವರೆಗೆ ವಿಜಯನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಹೊಸಪೇಟೆ ಘಟಕದ ಲೋಕಾಯುಕ್ತ ಪೆÇಲೀಸ್ ಉಪಾಧೀಕ್ಷಕರು ಅವರು ತಿಳಿಸಿದ್ದಾರೆ.

ಹೊಸಪೇಟೆಯ ಡ್ಯಾಂ ರಸ್ತೆಯ ನೆಹರು ಕಾಲೋನಿಯಲ್ಲಿರುವ ಸಹಕಾರಿ ಕಲ್ಯಾಣ ಮಂಟಪದಲ್ಲಿ ಮಾ.13 ಮತ್ತು ಮಾ.15 ರಂದು ಬೆ.10ಯಿಂದ ಸಂಜೆ.5 ಗಂಟೆವರೆಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ದೂರು ವಿಚಾರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಸರ್ಕಾರಿ ನೌಕರರಿಂದ ಸಕಾರಣವಿಲ್ಲದೇ ತೊಂದರೆ ಉಂಟಾಗಿದ್ದರೆ ಅಥವಾ ಸರ್ಕಾರಿ ನೌಕರರು ದುರಾಡಳಿತದಲ್ಲಿ ತೊಡಗಿದ್ದರೆ, ಅಂತಹ ದೂರುಗಳನ್ನು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಲೋಕಾಯುಕ್ತರ ಮುಂದೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande