ಬಳ್ಳಾರಿ, 10 ಮಾರ್ಚ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವವು ಮಂಗಳವಾರ ಸಂಜೆ 5.30ಕ್ಕೆ ಶ್ರದ್ಧೆ-ಭಕ್ತಿಗಳಿಂದ ಲಕ್ಷಾಂತರ ಭಕ್ತಾಧಿಗಳಿಂದ ನೆರವೇರಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ತಿಳಿಸಿದ್ದಾರೆ.
ಶ್ರೀ ಶಾಲಿವಾಹನ ಶಕೆ 1946ನೇ ಶ್ರೀಕ್ರೋಧಿ ನಾಮಸಂವತ್ಸರ ಪಾಲ್ಗುಣ ಮಾಸ ಪೂರ್ಣ ದಶಮಿಯಂದು ಬಳ್ಳಾರಿ ಶ್ರೀ ಕನಕ ದುರ್ಗಮ್ಮ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವದ ನೆರವೇರಲಿದೆ. ಸಿಡಿಬಂಡಿ ಅಂಗವಾಗಿ ಮಂಗಳವಾರ ಮಧ್ಯಾಹ್ನ 2.00 ಗಂಟೆಗೆ ಗಾಣಿಗರ ಸಂಘದವತಿಯಿಂದ ಪೂಜೆ, ಪ್ರಾರ್ಥನೆಗಳು ನಡೆಯಲಿವೆ.
ಸಣ್ಣ ದುರ್ಗಮ್ಮಗುಡಿಯಿಂದ ಕನಕ ದುರ್ಗಮ್ಮ ಗುಡಿಯವರೆಗೆ ಮೇಟಿ ಕುಂಭಪೂಜೆ ಮೆರವಣಿಗೆ ನಡೆಯಲಿದೆ. ನಂತರ ಸಂಜೆ 5.30ಕ್ಕೆ ತಾಯಿಯ ಸಿಡಿಬಂಡಿ ರಥೋತ್ಸವವ ನಡೆಯಲಿದೆ. ಸಿಡಿಬಂಡಿಯ ನಂತರ, ದೇವಸ್ಥಾನದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್