ರಾಯಚೂರು : ಮಾ.15ರಂದು ನೇರ ಸಂದರ್ಶನ
ರಾಯಚೂರು, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ನಗರದ ಜೆ.ಸಿ ಭವನದಲ್ಲಿ ಮಾ.15ರ ಬೆಳಿಗ್ಗೆ 10ರಿಂದ ಸಂಜೆ 4ಗಂಟೆವರೆಗೆ ನೇರ ಸಂದರ್ಶನ ಆಯೋಜನೆ ಮಾಡಿಲಾಗಿದ್ದು, ಆಸಕ್ತ ಯುವಕ ಅಥವಾ ಯುವತಿಯರು ಭಾಗಹಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿ
ರಾಯಚೂರು : ಮಾ.15ರಂದು ನೇರ ಸಂದರ್ಶನ


ರಾಯಚೂರು, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ನಗರದ ಜೆ.ಸಿ ಭವನದಲ್ಲಿ ಮಾ.15ರ ಬೆಳಿಗ್ಗೆ 10ರಿಂದ ಸಂಜೆ 4ಗಂಟೆವರೆಗೆ ನೇರ ಸಂದರ್ಶನ ಆಯೋಜನೆ ಮಾಡಿಲಾಗಿದ್ದು, ಆಸಕ್ತ ಯುವಕ ಅಥವಾ ಯುವತಿಯರು ಭಾಗಹಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ನೇರ ಸಂದರ್ಶನವನ್ನು ಎಸ್.ಐ.ಎಸ್ ಸೆಕ್ಯೂರಿಟಿ ಸರ್ವಿಸಸ್ ಹಾಗೂ ನಿರ್ಮಾನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿದ್ದು, ತಮ್ಮ ಕಂಪನಿಯಲ್ಲಿ ಖಾಲಿವಿರುವ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಿಕೊಳ್ಳಲಿದ್ದಾರೆ.

18 ರಿಂದ 32 ವರ್ಷಗಳವರೆಗಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಎಲ್ಲಾ ಪದವೀಧರ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವಿದ್ಯಾರ್ಹತೆಯ ಅಂಕ ಪಟ್ಟಿಗಳ ಜೆರಾಕ್ಸ್ ಪ್ರತಿಗಳು ಮತ್ತು ಬಯೋಡಾಟಾ, ಆಧಾರ್ ಕಾರ್ಡ್ ಪ್ರತಿ ಹಾಗೂ ಭಾವಚಿತ್ರಗಳೊಂದಿಗೆ ಆಗಮಿಸಬೇಕು.

ನೇರ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ, ಬದಲಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಈ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 08532-231684, 8095125775, 7795195171, 9008211750ಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ನವೀನ ಕುಮಾರ್ ಸಂಗೇಪಾಗ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande