ರಾಯಚೂರು ಜೆಸ್ಕಾಂ ನಗರ : ವಿದ್ಯುತ್ ವ್ಯತ್ಯಯ
ರಾಯಚೂರು, 10 ಮಾರ್ಚ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ನಗರ ಕಾರ್ಯ ಮತ್ತು ಪಾಲನೆ ವಿಭಾಗದ 110/11ಕೆವಿ ಎ.ಪಿ.ಎಮ್.ಸಿ ರಾಯಚೂರು ಸಬ್ ಸ್ಟೇಷನ್‍ನಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡ ಪ್ರಯುಕ್ತ ಮಾ.11ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 03ಗಂಟೆಯವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗ
ರಾಯಚೂರು ಜೆಸ್ಕಾಂ ನಗರ : ವಿದ್ಯುತ್ ವ್ಯತ್ಯಯ


ರಾಯಚೂರು, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ನಗರ ಕಾರ್ಯ ಮತ್ತು ಪಾಲನೆ ವಿಭಾಗದ 110/11ಕೆವಿ ಎ.ಪಿ.ಎಮ್.ಸಿ ರಾಯಚೂರು ಸಬ್ ಸ್ಟೇಷನ್‍ನಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡ ಪ್ರಯುಕ್ತ ಮಾ.11ರಂದು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 03ಗಂಟೆಯವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಅಂದು ಬೆಳಿಗ್ಗೆಯಿಂದ ಕೆ.ಐ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ, ಮಂಚಲಾಪುರ್ ರೋಡ್ ಇಂಡಸ್ಟ್ರಿಯಲ್ ಏರಿಯಾ, ಶ್ರೀನಿವಾಸ್ ಕಾಲೋನಿ, ಅಲ್ಲಮಪ್ರಭು ಕಾಲೋನಿ, ಹುಡೇಕರ್ ಕಾಲೋನಿ, ಪೋತ್ಗಲ್ ರೋಡ್, ಎಲ್.ಬಿ.ಎಸ್.ನಗರ, ವಿದ್ಯಾ ಕಾಲೋನಿ, ಮೈಲಾರ್ ನಗರ, ಎನ್.ಜಿ.ಓ ಕಾಲೋನಿ, ಅಲಿ ಕಾಲೋನಿ, ಸಂತೋಷ್ ನಗರ್, ಆಶ್ರಯ ಕಾಲೋನಿ, ಎಸ್.ಪಿ ಆಫೀಸ್, ಪೋಲೀಸ್ ಕಾಲೋನಿ, ಎಪಿಎಮ್ಸಿ ಗಂಜ್, ಕಾಳಿದಾಸ ನಗರ, ಕುಂಬಾರ್ ಓಣಿ, ನೂರ್ ಮಜಿದ್, ಹೌಂಸಿಂಗ್ ಬೋರ್ಡ್, ಹೈದ್ರಾಬಾದ್ ರೋಡ್ ಬೈಪಾಸ್ ಏರಿಯಾ, ಹೈದ್ರಾಬಾದ್ ರೋಡ್ ಇಂಡಸ್ಟ್ರಿಯಲ್ ಏರಿಯಾ, ಯರಮರಸ್, ವಾಟರ್ ಪ್ಲಾಂಟ್, ಯರಮರಸ್, ಪೋತ್ಗಲ್, ಅರ್ಜುನಪ್ಪ ಕಾಲೋನಿ, ಹುಂಡೇಕರ್ ಕಾಲೋನಿ, ಆದಿ ಬಸವೇಶ್ವರ, ರಿಮ್ಸ್ ಕಾಲೇಜ್ ಎಕ್ಸಪ್ರೆಸ್ ಫೀಡರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ 24/7ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande