ಕೊಪ್ಪಳ (ಭಾಗ್ಯನಗರ), 10 ಮಾರ್ಚ್ (ಹಿ.ಸ.) :
ಆ್ಯಂಕರ್ : ಎಲ್ಲರೂ ಜಾತಿ - ಧರ್ಮ ಎಂದು ಬಡಿದಾಡುತ್ತಿದ್ದರೂ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರತಿಭೆಗಳಿಗೆ ಜಾತಿ - ಧರ್ಮದ ಯಾವುದೇ ವ್ಯಾಪ್ತಿಗಳಿಲ್ಲ ಎಂದು ಮಲ್ಲಿಕಾರ್ಜುನ ಭಜಂತ್ರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾಗ್ಯನಗರದ ಜನತಾ ಕಾಲೊನಿಯ ಬಯಲು ವೇದಿಕೆಯಲ್ಲಿ ಏರ್ಪಡಿಸಿದ್ದ `ನಾದ ತರಂಗಿಣಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ಜಾತಿ, ಧರ್ಮ ಇದ್ದಿದ್ದಲ್ಲಿ ಮಹಾನ್ ತಬಲಾ ವಾದಕ ಪಂಡಿತ್ ಝಾಕೀರ್ ಹುಸೇನ್, ಮಹಾನ್ ಗಾಯಕ ಯೇಸುದಾಸ್, ಕಣ್ಣಿಲ್ಲದೆ ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ ಪುಟ್ಟರಾಜ ಗವಾಯಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿ, ಖ್ಯಾತ ನಾಮರಾಗಲು ಸಾಧ್ಯವಿರುತ್ತಿರಲಿಲ್ಲ ಎಂದರು.
ಭಾಗ್ಯನಗರದ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಹೊನ್ನೂರು ಸಾಬ್ ಭೈರಾಪುರ ಅವರು ಅತಿಥಿಗಳಾಗಿ, ಜೀವನ ಎಂದರೆ ಉತ್ತಮ ನಾಗರಿಕರಾಗಿ ಬದುಕುವುದು. ನಮ್ಮ ಕರ್ತವ್ಯದ ಮೇಲೆ ಆತ್ಮಗೌರವವಿದ್ದರೆ ಮಾತ್ರ ಬದುಕಲು ಸಾಧ್ಯ ಎಂದರು.
ವಿಜಯಲಕ್ಷೀ ಮ್ಯಾಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುಳಾ ಮ್ಯಾಗಳಮನಿ, ಪರಶುರಾಮ ದಲಭಂಜನ, ಕೆಂಚ್ಚಪ್ಪ ಮ್ಯಾಗಡೆ, ಉಪಸ್ಥಿತರಿದ್ದರು.
ನಂತರ ಮಂಗಳವಾದ್ಯ ಶಹನಾಯಿ ವಾದನ ಮಲ್ಲಿಕಾರ್ಜುನ ಭಜಂತ್ರಿ ಗದಗ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಅಧಿತಿ ಕುಲಕರ್ಣಿ ಕೊಪ್ಪಳ, ವಚನ ಗಾಯನ ಶಂಕ್ರಯ್ಯ ಗುರುಮಠ ಹುಬ್ಬಳ್ಳಿ, ಹಾರ್ಮೋನಿಯಂ ಸೋಲೋ ರಾಮಚಂದ್ರಪ್ಪ ಉಪ್ಪಾರ, ಜಾನಪದ ಗೀತೆ ಹಿರೇಮನಿ ಕಿನ್ನಾಳ, ಸುಗಮ ಸಂಗೀತ ಸ್ಪಂದನ ಕೆ ಎಂ. ಗಂಗಾವತಿ, ಭರತನಾಟ್ಯ ಅಪರ್ಣಾ ಹೆಗಡೆ ಹಾಗೂ ತಂಡ, ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು.
ವಾದ್ಯವೃಂದದ ಹಾರ್ಮೋನಿಯಂ ರಾಘವೇಂದ್ರ ಕೋಣಿ, ಕೀಬೋರ್ಡನಲ್ಲಿ ಕೆ ಪ್ರಕಾಶ್ ರಾಯದುರ್ಗ, ಬಾನ್ಸೂರಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್, ತಾಳವಾದ್ಯ ಕೃಷ್ಣ ಸೊರಟೂರ, ಮೆರುಗು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್